Monday, 07 May, 11.26 am ಕನ್ನಡದುನಿಯಾ

ಹೋಮ್
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದು ಯಾವಾಗ ಗೊತ್ತಾ?

ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜ್ಯದ ಆಡಳಿತಾತ್ಮಕ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಹುದ್ದೆಗೇರಲು ಪೈಪೋಟಿ ನಡೆದಿದೆ. ರಾಜ್ಯದಲ್ಲಿ ಕಾರಣಾಂತರದಿಂದ ಹಲವು ಬಾರಿ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.

ಭಾರತದ ಸಂವಿಧಾನದ 356 ನೇ ಅನುಚ್ಛೇದದ ಪ್ರಕಾರ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುತ್ತದೆ. ಯಾವುದೇ ರಾಜ್ಯದಲ್ಲಿ ಸರ್ಕಾರವು ತನ್ನ ಕಾರ್ಯ ನಿರ್ವಹಿಸಲಾಗದಿದ್ದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಮುಖ್ಯಮಂತ್ರಿ ನೇಮಕದಲ್ಲಿ ವಿಫಲವಾದ ಸಂದರ್ಭ, ಮೈತ್ರಿಕೂಟಗಳಲ್ಲಿ ಬಿರುಕು ಉಂಟಾದಾಗ, ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಿದಾಗ, ರಾಜಕೀಯ ಅಸ್ಥಿರತೆ ಉಂಟಾದಾಗ, ರಾಜ್ಯ ಸರ್ಕಾರ ಅಸಂವಿಧಾನಿಕವಾಗಿ ಕಾರ್ಯ ನಿರ್ವಹಿಸಿದರೆ, ಕಾನೂನು ಸುವ್ಯವಸ್ಥೆ ಕುಸಿದ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ.

19 ಮಾರ್ಚ್, 1971 ರಿಂದ 20 ಮಾರ್ಚ್, 1972 ರ ವರೆಗೆ 1 ವರ್ಷ 1 ದಿನ ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಇತ್ತು. ನಂತರದಲ್ಲಿ 31 ಡಿಸೆಂಬರ್ 1977 ರಿಂದ, 28 ಫೆಬ್ರವರಿ 1978 ರ ವರೆಗೆ 59 ದಿನಗಳ ಕಾಲ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.

ಅದೇ ರೀತಿ 21 ಏಪ್ರಿಲ್, 1989 ರಿಂದ 30 ನವೆಂಬರ್, 1989 ರ ವರೆಗೆ 193 ದಿನಗಳ ಕಾಲ ಮತ್ತು 10 ಅಕ್ಟೋಬರ್, 1990 ರಿಂದ 17 ಅಕ್ಟೋಬರ್, 1990 ರ ವರೆಗೆ 7 ದಿನಗಳ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.

9 ಅಕ್ಟೋಬರ್, 2007 ರಿಂದ 27 ಮೇ, 2008 ರ ವರೆಗೆ 189 ದಿನಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.

Dailyhunt
Top