Dailyhunt
'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಬರ್ತಡೇಗೆ ಬಿಡುಗಡೆಯಾದ ವಿಶೇಷ ವಿಡಿಯೋ ವೈರಲ್

'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಬರ್ತಡೇಗೆ ಬಿಡುಗಡೆಯಾದ ವಿಶೇಷ ವಿಡಿಯೋ ವೈರಲ್

'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬದ ದಿನದಂದು ಸ್ಯಾಂಡಲ್ ವುಡ್ ನ ಅನೇಕರು ಶುಭಾಶಯ ಕೋರಿದ್ದಾರೆ.

'ಕೆಜಿಎಫ್' ತಂಡ ಪ್ರಶಾಂತ್ ನೀಲ್ ಹುಟ್ಟು ಹಬ್ಬಕ್ಕೆ ವಿಶೇಷ ವೀಡಿಯೊ ಮಾಡಿದೆ. 'ತನ್ನ ತಂಡವನ್ನು ಎತ್ತರಕ್ಕೆ ಕರೆದೊಯ್ದ ಪ್ರಶಾಂತ್ ನೀಲ್ ಅವರಿಗೆ ಜನ್ಮದಿನದ ಶುಭಾಶಯಗಳು' ಎಂದು ಹಾರೈಸುವ ವಿಡಿಯೋ ಬಿಡುಗಡೆ ಮಾಡಲಾಗಿದೆ. 'ಕೆಜಿಎಫ್ ಚಾಪ್ಟರ್ 2' ಮತ್ತು 'ಸಲಾರ್' ದೊಡ್ಡ ಪರದೆಯಲ್ಲಿ ನೋಡಿ ಸಂಭ್ರಮಿಸುವುದನ್ನು ಕಾಯಲು ಸಾಧ್ಯವಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಗೆ ಜನ್ಮದಿನದ ಶುಭಾಶಯಗಳು ಎಂದು ವಿಡಿಯೋ ಮಾಡಲಾಗಿದೆ. 'ಕೆಜಿಎಫ್ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲಿದೆ' ಎಂಬ ನಟ ರಾಕಿಂಗ್ ಸ್ಟಾರ್ ಯಶ್ ಅವರ ಸಾಲುಗಳೊಂದಿಗೆ ವಿಡಿಯೋ ಕೊನೆಯಾಗುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia