ಕನ್ನಡದುನಿಯಾ

1.6M Followers

ಕೊರೊನಾ ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್: ಫೋಟೋ ಅಪ್ಲೋಡ್ ಮಾಡಿದ್ರೆ ʼಕೇಂದ್ರʼ ನೀಡಲಿದೆ 5 ಸಾವಿರ ರೂ.

21 May 2021.1:50 PM

ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿ ಸರ್ಕಾರ ಕೊರೊನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಿದೆ. ಮೇ 1‌ ರಿಂದ 18 ವರ್ಷ ಮೇಲ್ಪಟ್ಟ ಜನರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಮನೆಯಲ್ಲೇ ಕುಳಿತು 5 ಸಾವಿರ ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ.

ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಇದ್ರ ಫೋಟೋವನ್ನು ಸುಂದರ ಶೀರ್ಷಿಕೆ ಜೊತೆ ಅಪ್ಲೋಡ್ ಮಾಡಿದ್ರೆ ಆತನಿಗೆ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. Mygovindia ಅಧಿಕೃತ ಟ್ವೀಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸದ್ಯ ನೀವು ಲಸಿಕೆ ಹಾಕಿಸಿಕೊಂಡಿದ್ದರೆ ನೀವು ಲಕ್ಷಾಂತರ ಮಂದಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಬಹುದು. ಲಸಿಕೆ ಹಾಕಿದ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಒಳ್ಳೆ ಟ್ಯಾಗ್ಲೈನ್ ಹಾಕಿದ್ರೆ 5 ಸಾವಿರ ರೂಪಾಯಿ ಗೆಲ್ಲುವ ಅವಕಾಶ ಸಿಗ್ತಿದೆ ಎಂದು ಟ್ವಿಟ್ ಮಾಡಲಾಗಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

Mygovindia ನಲ್ಲಿ ಲಿಂಕ್ ಅಪ್ಲೋಡ್ ಮಾಡಲಾಗಿದೆ. ಅದನ್ನು ಓಪನ್ ಮಾಡುವ ಮೂಲಕ ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಬಹುದು. ಪ್ರತಿ ತಿಂಗಳು 10 ಮಂದಿಗೆ 5 ಸಾವಿರ ರೂಪಾಯಿ ಸಿಗಲಿದೆ. ನಿಮ್ಮ ಮನೆಯ ಸದಸ್ಯರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರೆ ಅವ್ರ ಫೋಟೋವನ್ನು ಒಳ್ಳೆ ಶೀರ್ಷಿಕೆ ಜೊತೆ ಹಾಕಿ ಜನರನ್ನು ಪ್ರೇರೇಪಿಸಬಹುದು. ಇದಕ್ಕಾಗಿ ಮೊದಲು https://mygov.in. ಗೆ ಲಾಗಿನ್ ಆಗಬೇಕು. ನಂತ್ರ ಟು ಪಾರ್ಟಿಸಿಪೇಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಹೆಸರು ನೋಂದಾಯಿಸಿಕೊಳ್ಳಬೇಕು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags