Saturday, 01 Aug, 11.13 am ಕನ್ನಡದುನಿಯಾ

ಅಂತರಾಷ್ಟ್ರೀಯ
ಕೊರೊನಾ ರೋಗಿಗಳಿಗೊಂದು ಖುಷಿ ಸುದ್ದಿ.!

ಕೊರೊನಾ ವೈರಸ್ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ. ಕೊರೊನಾ ಬಗ್ಗೆ ಹೊಸ ಹೊಸ ಸಂಗತಿಗಳು ಹೊರಗೆ ಬರ್ತಿವೆ. ಕೊರೊನಾ ವೈರಸ್ ಸೋಂಕಿತ ರೋಗಿ 9 ದಿನಗಳ ನಂತರ ಸಾಂಕ್ರಾಮಿಕವಾಗಿ ಉಳಿಯುವುದಿಲ್ಲವೆಂಬ ಸಂಗತಿ ಈಗ ಬಹಿರಂಗವಾಗಿದೆ. 9 ದಿನಗಳ ನಂತರ ಈ ರೋಗಕ್ಕೆ ತುತ್ತಾದ ರೋಗಿ ಸಂಪರ್ಕಕ್ಕೆ ಬೇರೆಯವರು ಬಂದ್ರೆ ಅವರಿಗೆ ಕೊರೊನಾ ಹರಡುವುದಿಲ್ಲವೆಂದರ್ಥ.

ರಾಯಿಟರ್ಸ್ ವರದಿಯ ಪ್ರಕಾರ, ವಿಜ್ಞಾನಿಗಳು 79 ಅಧ್ಯಯನಗಳಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ. ಗಂಟಲು, ಮೂಗು ಮತ್ತು ಮಲದಲ್ಲಿ ಸೋಂಕಿದ್ದರೂ ಒಂಬತ್ತು ದಿನಗಳ ನಂತರ ವೈರಸ್ ಕಣಗಳು ಸಾಂಕ್ರಾಮಿಕವಾಗುವುದಿಲ್ಲ ಎಂದು ಸಂಶೋಧನೆಯಿಂದ ಪತ್ತೆಯಾಗಿದೆ.

ಕೊರೊನಾ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಆರ್‌ಎನ್‌ಎ ರೋಗಿಯ ಗಂಟಲಿನ ಮೇಲೆ ಸರಾಸರಿ 17 ರಿಂದ 83 ದಿನಗಳವರೆಗೆ ಸೋಂಕು ಇರುತ್ತದೆ ಆದರೆ ಸೋಂಕು ಸಾಂಕ್ರಾಮಿಕವಾಗಿ ಉಳಿಯುವುದಿಲ್ಲ. ಪಿಸಿಆರ್ ಪರೀಕ್ಷೆಯಲ್ಲಿ ಈ ದುರ್ಬಲ ಆರ್‌ಎನ್‌ಎ ಪತ್ತೆಯಾಗಿದೆ. ಇದು ಒಂಬತ್ತು ದಿನಗಳ ನಂತರ ವೈರಸ್ ಹರಡಲು ವಿಫಲವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಧ್ಯಯನದ ಪ್ರಕಾರ, ಕೊರೊನಾ ವೈರಸ್‌ನ ಆರ್‌ಎನ್‌ಎ ದೀರ್ಘಕಾಲದವರೆಗೆ ಉಸಿರಾಟದಲ್ಲಿ ಮತ್ತು ಮಲದಲ್ಲಿ ಉಳಿಯಬಹುದು. ಆದರೆ ಕೆಲ ದಿನ ಮಾತ್ರ ಸಕ್ರಿಯವಾಗಿರುತ್ತದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top