Saturday, 27 Feb, 3.24 pm ಕನ್ನಡದುನಿಯಾ

ಟಾಪ್ ನ್ಯೂಸ್
ಕೊರೊನಾದಿಂದ ಪಾರಾಗೋಕೆ ಸಂಗೀತ ಶಾಲೆಯಲ್ಲಿ ಮಾಡಲಾಯ್ತು ವಿಚಿತ್ರ ಪ್ಲಾನ್​..!

ಕೊರೊನಾ ವೈರಸ್​ನಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಅನಿವಾರ್ಯವಾಗಿದೆ. ಈಗಾಗಲೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು ತರಗತಿಗಳನ್ನ ಆರಂಭಿಸಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯಗೊಳಿಸಿವೆ.

ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲೂ ಸಂಗೀತ ತರಗತಿ ಆರಂಭಿಸಲಾಗಿದ್ದು, ಪ್ರತಿಯೊಂದು ವಿದ್ಯಾರ್ಥಿಗಳನ್ನ ಸಾಮಾಜಿಕ ಅಂತರದಲ್ಲಿ ಕೂರಿಸೋದ್ರ ಜೊತೆಗೆ ಪ್ರತಿಯೊಬ್ಬರನ್ನ ಪ್ರತ್ಯೇಕ ಟೆಂಟ್​ನ ಒಳಗಡೆ ಕೂರಿಸಲಾಗಿದೆ. ರೆಡಿಟ್​ನಲ್ಲಿ ಈ ವಿಡಿಯೋವನ್ನ ಶೇರ್​ ಮಾಡಲಾಗಿದ್ದು ಸಖತ್​ ವೈರಲ್​ ಆಗಿದೆ.

ವಿದ್ಯಾರ್ಥಿಗಳೆಲ್ಲರೂ ಹಸಿರು ಬಣ್ಣದ ಮಿನಿ ಟೆಂಟ್​ನ ಒಳಗಡೆ ಕೂತು ತಮ್ಮ ಸಂಗೀತ ಸಾಧನವನ್ನ ನುಡಿಸುತ್ತಿದ್ದಾರೆ. ಇದನ್ನ ನೋಡಿದ ನೆಟ್ಟಿಗನೊಬ್ಬ ಇಷ್ಟು ಪುಟ್ಟ ಟೆಂಟ್​ನ ಒಳಗಡೆ ದೊಡ್ಡ ದೊಡ್ಡ ಸಂಗೀತ ಸಾಧನವನ್ನ ಹೇಗೆ ಇಡಲಾಗಿದೆ ಎಂದು ಆಶ್ಚರ್ಯ ಹೊರಹಾಕಿದ್ದಾರೆ. ಇನ್ನೊಬ್ಬ ನೆಟ್ಟಿಗರು, ನಾನು ನಮಗಾಗಿ ಅಲ್ಲದೇ ಹೋದರು ನಿಮ್ಮ ಸ್ಥಿತಿಯನ್ನ ನೋಡಿದ ಬಳಿಕ ಲಸಿಕೆ ಸ್ವೀಕರಿಸಲಿದ್ದೇನೆ ಎಂದು ಕಮೆಂಟ್​ ಮಾಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top