Friday, 20 Nov, 2.05 pm ಕನ್ನಡದುನಿಯಾ

ಹೋಮ್
'ಕೊರೊನಾಗೆ ಜೈ' ಎನ್ನುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರು.! ಅಚ್ಚರಿಯಾಗುವಂತಿದೆ ಇದರ ಹಿಂದಿನ ಕಾರಣ

ಕೊರೊನಾ ಅಂದರೆ ಸಾಕು ಜನರು ಮೂಗು ಮುರಿಯೋ ಈ ಟೈಂನಲ್ಲಿ ಕೇರಳದಲ್ಲಿ ಮಾತ್ರ ಬಿಜೆಪಿ ಕಾರ್ಯಕರ್ತರು ಕೊರೊನಾಗೆ ಜೈ ಅಂತಾ ಹೇಳ್ತಿದ್ದಾರೆ.

ಅಂದಹಾಗೆ ಬಿಜೆಪಿ ಕಾರ್ಯಕರ್ತರು ಈ ರೀತಿ ಕೊರೊನಾಗೆ ಜೈಕಾರ ಹಾಕೋಕೆ ಕಾರಣಾನೂ ಇದೆ. ಕೇರಳದ ಕೊಲ್ಲಮ್​ ಕಾರ್ಪೋರೇಷನ್​ನ ಮೈಥಿಲಿ ವಾರ್ಡ್​ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಹೆಸರು ಕೊರೊನಾ ಥಾಮಸ್​.

24 ವರ್ಷದ ಕೊರೊನಾ ಥಾಮಸ್​ಗೆ ಅವರ ಹೆಸರು ಈ ವರ್ಷ ತುಂಬಾನೇ ಪ್ರಸಿದ್ಧಿ ತಂದುಕೊಟ್ಟಿದೆಯಂತೆ. ಇಷ್ಟು ವರ್ಷ ನನ್ನ ಹೆಸರಿನ ಬಗ್ಗೆ ನನಗೆ ಏನೂ ಅನ್ನಿಸ್ತಾ ಇರಲಿಲ್ಲ. ಆದರೆ ಇದೀಗ ಎಲ್ಲೆಡೆ ಕೊರೊನಾ ವೈರಸ್​ನದ್ದೇ ಚರ್ಚೆ ಬಳಿಕ ನನ್ನ ಹೆಸರೇ ನನಗೆ ವಿಚಿತ್ರ ಎನಿಸೋಕೆ ಶುರುವಾಗಿದೆ ಅಂತಾರೆ ಕೊರೊನಾ ಥಾಮಸ್​.

ಕೊರೊನಾರ ತಂದೆ ಮೂಲತಃ ಕಲಾವಿದರಂತೆ. ತಮ್ಮ ಅವಳಿ ಮಕ್ಕಳಿಗೆ ವಿಶೇಷವಾದ ಹೆಸರನ್ನಿಡಬೇಕು ಎಂದು ನಿರ್ಧರಿಸಿದ ಅವರು, ಹೆಣ್ಣು ಮಗುವಿಗೆ ಕೊರೊನಾ ಹಾಗೂ ಗಂಡು ಮಗುವಿಗೆ ಕೋರಲ್​ ಎಂದು ನಾಮಕರಣ ಮಾಡಿದ್ದರಂತೆ.

ಅಂದಹಾಗೆ ಕೊರೊನಾ ಗರ್ಭಿಣಿಯಾಗಿದ್ದಾಗ ಕೊರೊನಾ ಸೋಂಕು ದೃಢವಾಗಿದ್ದರಿಂದಲೂ ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿದ್ದರು. ಆದರೆ ಕೊರೊನಾ ವಿರುದ್ಧ ಜಯಿಸಿರುವ ಕೊರೊನಾ ಥಾಮಸ್​ ಮಗು ಕೂಡ ಆರೋಗ್ಯವಾಗಿದೆ. ಕೊರೊನಾ ಪತಿ ಕೂಡ ಬಿಜೆಪಿ ಸದಸ್ಯರಾಗಿದ್ದು ಕೊರೊನಾ ರಾಜಕೀಯ ಹಾದಿ ತುಳಿಯಲು ಅವರೇ ಸ್ಪೂರ್ತಿಯಾಗಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top