Dailyhunt
ಕೊಟ್ಟ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಯುವಕರ ಗ್ಯಾಂಗ್ ನಿಂದ ಹಲ್ಲೆ

ಕೊಟ್ಟ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಯುವಕರ ಗ್ಯಾಂಗ್ ನಿಂದ ಹಲ್ಲೆ

ಕಾರವಾರ: ಕೊಟ್ಟ ಹಣ ವಾಪಸ್ ನೀಡುವಂತೆ ಕೇಳಿದಕ್ಕೆ ಮಹಿಳೆಯರನ್ನು ಯುವಕರ ಗ್ಯಾಂಗ್​​ ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೆಹರು ನಗರದಲ್ಲಿ ನಡೆದಿದೆ.

ಯಲ್ಲಾಪುರದ ಮಹಿಳೆಯರಾದ ಆಯಿಷಾ ಮತ್ತು ಗೀತಾ ಎಂಬವರ ಮೇಲೆ ಮೊಹ್ಮದ್ ಸಲ್ಮಾನ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗ್ಯಾಂಗ್​​ ಮಹಿಳೆಯರ ಖಾಸಗಿ ಭಾಗದ ಮೇಲೆ ಅಟ್ಯಾಕ್​​ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮಹಿಳೆಯರ ಪೈಕಿ ಆಯಿಷಾ ಆರೋಪಿ ಸಲ್ಮಾನ್​​ಗೆ ಅಂಗಡಿ ಹಾಕಲು 3 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಈ ನಡುವೆ ಪತಿ ಮೃತಪಟ್ಟ ಕಾರಣ ಕೆಲ ದಿನಗಳ ಕಾಲ ಹುಬ್ಬಳ್ಳಿಗೆ ತೆರಳಿ ಅವರು ನೆಲೆಸಿದ್ದರು. ಎರಡು ತಿಂಗಳ ಬಳಿಕ ಮರಳಿ ಆಯಿಷಾ ಯಲ್ಲಾಪುರಕ್ಕೆ ಬಂದಾಗ ಸಲ್ಮಾನ್​​ ಊರಲ್ಲಿ ಇರಲಿಲ್ಲ. ಯಲ್ಲಾಪುರ ತೊರೆದಿದ್ದ ಆತ ಶಿರಸಿಗೆ ಬಂದು ಅಲ್ಲಿ ವ್ಯಾಪಾರ ಮಾಡುತ್ತಿದ್ದಾನೆ ಎಂಬ ವಿಷಯ ಸಂತ್ರಸ್ತೆಗೆ ಗೊತ್ತಾಗಿದೆ. ಹೀಗಾಗಿ ನೇರವಾಗಿ ಶಿರಸಿಗೆ ತೆರಳಿರುವ ಅವರು ಕೊಟ್ಟ ಹಣ ಹಿಂದಿರುಗಿಸುವಂತೆ ಸಲ್ಮಾನ್​​ಗೆ ಕೇಳಿದ್ದಾರೆ. ಇದೇ ವಿಚಾರವಾಗಿ ಮಾತುಕತೆ ವೇಳೆ ಏಕಾಏಕಿ ಬಂದ ನಾಲ್ಕೈದು ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಿಗ್ಗಾಮುಗ್ಗ ಥಳಿಸಿದೆ.

ಸಂತ್ರಸ್ತೆ ಹೇಳುವಂತೆ ಯಲ್ಲಾಪುರದಲ್ಲಿ 18-20 ವರ್ಷಗಳಿಂದ ನೆಲೆಸಿದ್ದ ಯುಪಿ ಮತ್ತು ಬಿಹಾರದ ಹುಡುಗರು ಸಲೂನ್​​ ಉದ್ಯಮದ ಪಾಲುದಾರರಾಗುವಂತೆ ಕೇಳಿದ್ದರು. ಅದನ್ನು ನಂಬಿ ನಾವು ಹಣ ನೀಡಿದ್ದೆವು. ಆ ಬಳಿಕ ನಗರದಲ್ಲಿ ಶಾಪ್​​ ಒಂದನ್ನು ತೆರೆದಿದ್ದ ಅವರು, ಬಳಿಕ ಅದನ್ನು ಕ್ಲೋಸ್​​ ಮಾಡಿದ್ದಾರೆ. ಅನುಮಾನಗೊಂಡು ವಿಚಾರಿಸಿದಾಗ ಹಲವೆಡೆ ಅವರು ಸಾಲ ಮಾಡಿರೋದು ಗೊತ್ತಾದ ಕಾರಣ, ಸಂತ್ರಸ್ತೆ ಮಹಿಳೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಆ ವೇಳೆ ಮುಚ್ಚಳಿಕೆ ನೀಡಿ ಹಣ ಕೊಡೋದಾಗಿ ಒಪ್ಪಿದ್ದ ಖದೀಮರು, ಬಳಿಕ ಹಣ ನೀಡದೆ ತಲೆಮರೆಸಿಕೊಂಡಿದ್ದರು. ಈ ನಡುವೆ ಆರೋಪಿಗಳು ಶಿರಸಿಯಲ್ಲಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿದೆ. ಅಲ್ಲಿಹೋಗಿ ಆತನ ಸಹೋದರನ ಬಳಿ ಈ ಬಗ್ಗೆ ಕೇಳಿದಾಗ ಸಂತ್ರಸ್ತೆ ಮತ್ತು ಅವರ ಜೊತೆಗಿದ್ಧ ಮಹಿಳೆ ಮೇಲೆ ಗ್ಯಾಂಗ್​​ ಹಲ್ಲೆ ನಡೆಸಿದೆಯಂತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia