ಕನ್ನಡದುನಿಯಾ
1.5M Followersವಾಟ್ಸಾಪ್ ಸೇವೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಕೂಡ ಇಂಥದ್ದೊಂದು ಸೇವೆಗೆ ಮುಂದಾಗಿದೆ.
ಟ್ವಿಟ್ಟರ್ನಲ್ಲಿ ಈ ಕುರಿತ ಮಾಹಿತಿಯನ್ನು ಎಲ್‌ಐಸಿ ನೀಡಿದೆ. ಎಲ್‌ಐಸಿ ಪೋರ್ಟಲ್ ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸಾಪ್ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯುವುದು ಇನ್ನು ಸಾಧ್ಯವಾಗಲಿದೆ.
ಈ ಸೇವೆ ಪಡೆಯಲು ಮೊದಲು ಮೊಬೈಲ್ ಫೋನ್ ಮೂಲಕ ಎಲ್‌ಐಸಿ ಪೋರ್ಟಲ್ನಲ್ಲಿ ನಿಮ್ಮ ಎಲ್‌ಐಸಿ ಪಾಲಿಸಿಗಳನ್ನು ನೋಂದಣಿ ಮಾಡಿಕೊಳ್ಳಬೇಕು. ನಂತರ ನಿಮ್ಮ ವಾಟ್ಸಾಪ್ ನಿಂದ 8976862090 ಸಂಖ್ಯೆಗೆ "Hi" ಎಂದು ಮೆಸೇಜ್ ಕಳುಹಿಸಬೇಕು. ಆ ಬಳಿಕ ನಿಮಗೆ ಯಾವೆಲ್ಲ ಸೇವೆಗಳು ಲಭ್ಯವಿವೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿ ಆಯಾ ಸೇವೆಗೆ ಸಂಬಂಧಿಸಿದ ಸಂಖ್ಯೆ ಆಯ್ಕೆ ಮಾಡಿದರೆ ಅಗತ್ಯವಿರುವ ಮಾಹಿತಿ ಲಭಿಸುತ್ತದೆ.
ಈ ರೀತಿ ಮಾಡುವ ಮೂಲಕ ನೀವು, ಪ್ರೀಮಿಯಂ ಪಾವತಿ ಅಂತಿಮ ದಿನಾಂಕ, ಬೋನಸ್ ಮಾಹಿತಿ, ಪಾಲಿಸಿ ಸ್ಟೇಟಸ್, ಸಾಲ ಮರುಪಾವತಿ ಮಾಹಿತಿ, ಸಾಲದ ಅರ್ಹತಾ ಮಾಹಿತಿ, ಸಾಲದ ಬಡ್ಡಿದರ ಗಡುವು, ಪ್ರೀಮಿಯಂ ಪಾವತಿ ಪ್ರಮಾಣಪತ್ರ, ಯುಲಿಪ್ (ULIP)-ಸ್ಟೇಟ್ಮೆಂಟ್ ಆಫ್ ಯುನಿಟ್ಸ್, ಎಲ್‌ಐಸಿ ಸರ್ವೀಸಸ್ ಲಿಂಕ್ಸ್, ಅಪ್ಟ್ ಇನ್/ಅಪ್ಟ್ ಔಟ್ ಸರ್ವೀಸಸ್ ಪಡೆದುಕೊಳ್ಳಬಹುದು.
ನೋಂದಣಿ ಮಾಡಿಕೊಳ್ಳುವುದು ಹೀಗೆ:
- www.licindia.in ಭೇಟಿ ನೀಡಿ, ಆ ಬಳಿಕ "Customer Portal" ಆಯ್ಕೆ ಮಾಡಿ.
- 'New user' ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಆಯ್ಕೆ ಮಾಡಿ. ಆ ಬಳಿಕ ಮುಂದಿನ ಸ್ಕ್ರೀನ್ ನಲ್ಲಿ ಸಲ್ಲಿಕೆ ಮಾಡಿ.
- ಹೊಸದಾಗಿ ಸೃಷ್ಟಿಯಾದ ಯೂಸರ್ ಐಡಿ ಬಳಸಿಕೊಂಡು ಲಾಗ್ ಇನ್ ಆಗಿ. ಆ ಬಳಿಕ "Basic Services" ಅಡಿಯಲ್ಲಿ "Add Policy" ಆಯ್ಕೆ ಮಾಡಿ.
- ಈಗ ನಿಮ್ಮ ಉಳಿದೆಲ್ಲ ಪಾಲಿಸಿಗಳನ್ನು ನೋಂದಣಿ ಮಾಡಿ.
- ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಸೇರಿದಂತೆ ಮೂಲ ಮಾಹಿತಿಗಳನ್ನು ಪೋರ್ಟಲ್ ನಲ್ಲಿ ಭರ್ತಿ ಮಾಡಿ.
Disclaimer
This story is auto-aggregated by a computer program and has not been created or edited by Dailyhunt Publisher: Kannada Dunia