ಕನ್ನಡದುನಿಯಾ

1.5M Followers

ಲ್ಯಾಪ್ಸ್ ಆದ ಪಾಲಿಸಿ ಹೊಂದಿರುವ LIC ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

24 Aug 2021.07:42 AM

ಬಹುತೇಕರು ಜೀವವಿಮೆ ಮಾಡಿಸಿರುತ್ತಾರಾದರೂ ಕೆಲವರು ಸಕಾಲಕ್ಕೆ ಪ್ರೀಮಿಯಂ ಪಾವತಿಸದ ಕಾರಣ ಅಂತಹ ಪಾಲಿಸಿಗಳು ಲ್ಯಾಪ್ಸ್ ಆಗಿರುತ್ತವೆ. ಅಂತಹ ಪಾಲಿಸಿಗಳ ನವೀಕರಣಕ್ಕೆ ಎಲ್‌ಐಸಿ ಮುಂದಾಗಿದ್ದು, ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.

2021ರ ಆಗಸ್ಟ್ 23ರಿಂದ ಅಕ್ಟೋಬರ್ 22ರ ತನಕ ಎಲ್‌ಐಸಿ ಈ ವಿಶೇಷ ಅಭಿಯಾನ ಮುಂದುವರೆಯಲಿದ್ದು, ಮೊದಲ ಪ್ರೀಮಿಯಂ ಪಾವತಿಸದ ದಿನಾಂಕದಿಂದ ಐದು ವರ್ಷದ ತನಕದ ಅವಧಿಯ ಪಾಲಿಸಿಗಳನ್ನು ಯೋಜನೆಯಡಿ ನವೀಕರಿಸಬಹುದಾಗಿದೆ.

LIC ಗ್ರಾಹಕರಿಗೆ ಗುಡ್ ನ್ಯೂಸ್, ರದ್ದಾದ ಪಾಲಿಸಿ ನವೀಕರಣ

ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ತಗಲುವ ವಿಳಂಬ ಶುಲ್ಕಕ್ಕೆ ರಿಯಾಯಿತಿಯನ್ನು ಸಹ ಎಲ್‌ಐಸಿ ಪ್ರಕಟಿಸಿದ್ದು, ಆದರೆ ವೈದ್ಯಕೀಯ ವಿಮೆಗೆ ರಿಯಾಯಿತಿ ಇರುವುದಿಲ್ಲ ಎಂದು ತಿಳಿಸಲಾಗಿದೆ. ಲ್ಯಾಪ್ಸ್ ಆದ ಪಾಲಿಸಿ ಹೊಂದಿರುವ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯುವಂತೆ ಎಲ್‌ಐಸಿ ಕೋರಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags