Thursday, 29 Oct, 8.18 am ಕನ್ನಡದುನಿಯಾ

ಹೋಮ್
ಮದುವೆಯಾದ ಮೂರೇ ತಿಂಗಳಿಗೆ ಪತಿಯಿಂದ ಪತ್ನಿ ಹತ್ಯೆ

ಲಾಕ್​ಡೌನ್​ ಟೈಂನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯವರೆಗೂ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಥಾನಾ ಕ್ಷೇತ್ರದ ಜಾವ್ರಾ ಕಾಂಪೌಂಡ್​ ಇಲಾಖೆಯಲ್ಲಿ ಈ ಕೊಲೆ ನಡೆದಿದೆ. ಮದುವೆಯಾದ ಮೂರೇ ತಿಂಗಳಿಗೆ ಪತಿ ತನ್ನ ಪತ್ನಿಯ ಕುತ್ತಿಗೆಗೆ ನಾಯಿಗೆ ಹಾಕುವ ಚೈನ್​​ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಹಾಗೂ ತಾನೇ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಪೊಲೀಸರು ಮೃತ ಮಹಿಳೆಯ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಂಶು ಶರ್ಮಾ ಹಾಗೂ ಹರ್ಷ ನಡುವೆ ಲಾಕ್​ಡೌನ್​ ಸಮಯದಲ್ಲಿ ಪ್ರೀತಿಯಾಗಿತ್ತು. ಆಗಸ್ಟ್​ನಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಪರಿವಾರದ ಕಲಹದಿಂದ ಬೇಸತ್ತ ಪತಿ ಮದುವೆಯಾದ ಮೂರೇ ತಿಂಗಳಿಗೆ ಪತ್ನಿ ಅಂಶು ಶರ್ಮಾಳನ್ನ ಕೊಲೆಗೈದಿದ್ದಾನೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top