Thursday, 12 Nov, 6.25 am ಕನ್ನಡದುನಿಯಾ

ಹೋಮ್
ನ.13ರಂದು 'ವಿಂಡೋಸೀಟ್' ಸಿನಿಮಾ ಟೀಸರ್ ರಿಲೀಸ್

ನಿರೂಪ್ ಭಂಡಾರಿ ಅಭಿನಯದ 'ವಿಂಡೋ ಸೀಟ್' ಸಿನಿಮಾದ ಟೀಸರ್ ಅನ್ನು ಇದೇ ತಿಂಗಳು ನವೆಂಬರ್ 13ರಂದು ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರವನ್ನು ಶೀತಲ್ ಶೆಟ್ಟಿ ನಿರ್ದೇಶಿಸಿದ್ದು‌, ಜಾಕ್ ಮಂಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ನಾಯಕಿಯರಾಗಿ ಅಭಿನಯಿಸಿದ್ದು, ಇತ್ತೀಚಿಗಷ್ಟೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು.

ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಈಗಾಗಲೇ ಕುತೂಹಲ ಹೆಚ್ಚಿಸಿದ್ದು ಇದೀಗ ಟೀಸರ್ ಅನ್ನು ನವೆಂಬರ್ 13ಕ್ಕೆ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top