Thursday, 04 Mar, 8.09 am ಕನ್ನಡದುನಿಯಾ

ಹೋಮ್
ನಗು ತರಿಸುತ್ತೆ ಪಲ್ಟಿಯಾದ ಲಾರಿ ಚಾಲಕನ ವರ್ತನೆ

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫನ್ನಿ ಫೋಟೋಗಳು ವೈರಲ್​ ಆಗುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರಿದ ಮತ್ತೊಂದು ಫೋಟೋ ಇಂಟರ್ನೆಟ್​ನಲ್ಲಿ ಹರಿದಾಡ್ತಾ ಇದ್ದು ಇದನ್ನ ನೋಡಿದ ಬಳಿಕ ನಿಮಗೆ ನಿಮ್ಮ ಲವ್​ ಲೈಫ್​ ನೆನಪಾಗೋದಂತು ಫಿಕ್ಸ್.

ಮನುಷ್ಯ ಪ್ರೀತಿಯಲ್ಲಿ ಬಿದ್ದ ಅಂದರೆ ಸಾಕು ಆತನಿಗೆ ಹಸಿವು - ನಿದ್ದೆಯ ಅರಿವು ಇರೋದಿಲ್ಲ ಅಂತಾರೆ. ಅಕ್ಕಪಕ್ಕದಲ್ಲಿ ಏನು ನಡೀತಾ ಇದೆ ಅನ್ನೋದೇ ಅವರ ಗಮನಕ್ಕೆ ಬರೋದಿಲ್ಲ. ಇಂಟರ್ನೆಟ್​ನಲ್ಲಿ ವೈರಲ್​ ಆದ ಫೋಟೋ ಕೂಡ ಈ ಮಾತಿಗೆ ಕೈಗನ್ನಡಿಯಂತಿದೆ. ಹಿಂದೆ ಈರುಳ್ಳಿ ತುಂಬಿದ ಲಾರಿ ಪಲ್ಟಿಯಾಗಿ ಬಿದ್ದಿದ್ದರೂ ಸಹ ಈ ಗಂಭೀರತೆ ಅರ್ಥವೇ ಆಗದ ರೀತಿಯಲ್ಲಿ ಡ್ರೈವರ್​ ಫೋನ್​​ ಕಾಲ್​ನಲ್ಲಿ ಮಗ್ನನಾಗಿದ್ದಾನೆ.

ಈ ಫೋಟೋವನ್ನ ಐಪಿಎಸ್​ ಅಧಿಕಾರಿ ಅರುಣ್​ ಬೇಥರಾ ಶೇರ್​ ಮಾಡಿದ್ದಾರೆ. ಈ ಫೋಟೋ ನೋಡ್ತಿದ್ರೆ ಆ ಕಡೆ ಲೈನ್​ನಲ್ಲಿ ಯಾರಿದ್ದಾರೆ ಅನ್ನೋದನ್ನ ಸುಲಭವಾಗಿ ಊಹಿಸಬಹುದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸಖತ್​ ವೈರಲ್​ ಆಗಿದ್ದು ಟ್ರೋಲಿಗರ ಬಾಯಿಗೆ ಬಾಡೂಟದಂತಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top