ಅಂತರಾಷ್ಟ್ರೀಯ
ನೈರ್ಮಲ್ಯ ಕಾರ್ಮಿಕನ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ
ಕಾರು ಡಿಕ್ಕಿ ಹೊಡೆಯುವುದರಿಂದ ಬಾಲಕನನ್ನು ನೈರ್ಮಲ್ಯ ಕಾರ್ಮಿಕನೊಬ್ಬ ರಕ್ಷಿಸಿರುವ ಘಟನೆ ನಡೆದಿದೆ. ಸದ್ಯ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಅಲ್ಲದೆ ಅಪಾರ ಪ್ರಶಂಸೆಗೂ ಪಾತ್ರವಾಗಿದೆ.
ಈ ಸಿಸಿ ಟಿವಿ ದೃಶ್ಯಾವಳಿಯನ್ನು ವೃತ್ತಿಪರ ಬಾಸ್ಕೆಟ್ ಬಾಲ್ ನ ಮಾಜಿ ಆಟಗಾರ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ರೆಕ್ಸ್ ಚಾಪ್ ಮ್ಯಾನ್ ಹಂಚಿಕೊಂಡಿದ್ದಾರೆ. ದೃಶ್ಯದಲ್ಲಿ ಚಿಕ್ಕ ಬಾಲಕನೊಬ್ಬ ಕಸದ ಲಾರಿ ಹೋಗುವುವುಕ್ಕಾಗಿ ಮನೆ ಗೇಟ್ ಬಳಿ ಕಾಯುತ್ತಿದ್ದ. ಅದು ಮುಂದಕ್ಕೆ ಚಲಿಸುತ್ತಿದ್ದಂತೆ ಹಿಂದಿನಿಂದ ಬಾಲಕ ಓಡಿದ್ದಾನೆ. ಈ ವೇಳೆ ಎದುರಿನಿಂದ ವೇಗವಾಗಿ ಕಾರು ಬಂದಿದೆ. ಕೂಡಲೇ ಅಲ್ಲಿದ್ದ ನೈರ್ಮಲ್ಯ ಕಾರ್ಮಿಕ ಬಾಲಕನನ್ನು ಕೂದಲೆಳೆ ಅಂತರದಲ್ಲಿ ಕಾಪಾಡಿದ್ದಾನೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿರುವ ಈ ವಿಡಿಯೋವನ್ನು 1.3 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಾಗೆಯೇ ನೈರ್ಮಲ್ಯ ಕಾರ್ಮಿಕನಿಗೆ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
If you've already seen a sanitation worker save a little boy's life today just keep on scrolling. pic.twitter.com/lVG44aSnco
- Rex Chapman🏇🏼 (@RexChapman) September 5, 2021