Dailyhunt
ನೀವು ಹೋಗುವ ದಾರಿಯಲ್ಲಿ ಕಪ್ಪು ಬೆಕ್ಕು ಅಡ್ಡ ಬಂದರೆ ಶುಭವೋ? ಅಶುಭವೋ?ನಂಬಿಕೆಗಳ ಹಿಂದಿರುವ ಸತ್ಯ ಇಲ್ಲಿದೆ

ನೀವು ಹೋಗುವ ದಾರಿಯಲ್ಲಿ ಕಪ್ಪು ಬೆಕ್ಕು ಅಡ್ಡ ಬಂದರೆ ಶುಭವೋ? ಅಶುಭವೋ?ನಂಬಿಕೆಗಳ ಹಿಂದಿರುವ ಸತ್ಯ ಇಲ್ಲಿದೆ

ಬೆಂಗಳೂರು: ಶುಭ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಅಡ್ಡ ಬಂದರೆ ಸಾಕು, ಎಷ್ಟೋ ಜನರಿಗೆ ಎದೆ ಢವಢವ ಎನ್ನಲಾರಂಭಿಸುತ್ತದೆ. ಅದರಲ್ಲೂ ಕಪ್ಪು ಬೆಕ್ಕನ್ನು ಕಂಡರೆ ಇಂದಿನ ಕೆಲಸ ಮುಗಿಯಿತು ಎಂದುಕೊಂಡು ದಾರಿ ಬದಲಿಸುವವರೇ ಹೆಚ್ಚು. ಆದರೆ, ಬೆಕ್ಕು ಅಡ್ಡ ಬರುವುದು ನಿಜಕ್ಕೂ ಅಪಶಕುನವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ?

ಈ ಕುರಿತು ಜಗತ್ತಿನಾದ್ಯಂತ ಇರುವ ವಿವಿಧ ನಂಬಿಕೆಗಳ ಬಗ್ಗೆ ಇಂದಿನ ವಿಶೇಷ ವರದಿ.

ಭಾರತೀಯ ನಂಬಿಕೆ: ರಾಹುವಿನ ವಾಹನ

ನಮ್ಮ ದೇಶದಲ್ಲಿ ಕಪ್ಪು ಬಣ್ಣವನ್ನು ಶನಿದೇವನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಕ್ಕನ್ನು ರಾಹುವಿನ ವಾಹನವೆಂದು ನಂಬಲಾಗಿದೆ. ರಾಹುವು ಅಶುಭ ಫಲಗಳನ್ನು ತರುತ್ತಾನೆ ಎಂಬ ನಂಬಿಕೆ ಇರುವುದರಿಂದ, ಬೆಕ್ಕು ದಾರಿ ದಾಟಿದಾಗ ಅಲ್ಲಿ ಸ್ವಲ್ಪ ಸಮಯ ನಿಂತು ಹೋಗುವುದು ಅಥವಾ ದಾರಿ ಬದಲಿಸುವುದು ರೂಢಿಯಲ್ಲಿದೆ.

ಹಳೆಯ ಕಾಲದ ಸಿಗ್ನಲ್ ಈಗ ಮೂಢನಂಬಿಕೆಯಾಯ್ತಾ?

ಪ್ರಾಚೀನ ಕಾಲದಲ್ಲಿ ಜನರು ಕಾಡಿನ ದಾರಿಗಳಲ್ಲಿ ಎತ್ತಿನ ಗಾಡಿ ಅಥವಾ ಕುದುರೆಗಳ ಮೇಲೆ ಪ್ರಯಾಣಿಸುತ್ತಿದ್ದರು. ಬೆಕ್ಕುಗಳು ಆರನೇ ಇಂದ್ರಿಯವನ್ನು ಹೊಂದಿದ್ದು, ಕಾಡು ಪ್ರಾಣಿಗಳ ಆಗಮನವನ್ನು ಮುಂಚಿತವಾಗಿಯೇ ಅರಿಯುತ್ತಿದ್ದವು. ಕಾಡು ಬೆಕ್ಕು ದಾರಿ ದಾಟಿದರೆ ಅದರ ಹಿಂದೆ ಚಿರತೆ ಅಥವಾ ಹುಲಿ ಇರಬಹುದು ಎಂಬ ಮುನ್ಸೂಚನೆಯಾಗಿ ಜನರು ಅಲ್ಲಿ ನಿಲ್ಲುತ್ತಿದ್ದರು. ಕಾಲಕ್ರಮೇಣ ಈ ‘ಸುರಕ್ಷತಾ ಕ್ರಮವೇ ಮೂಢನಂಬಿಕೆಯಾಗಿ ಬದಲಾಗಿದೆ ಎಂದು ತಜ್ಞರು ವಿವರಿಸುತ್ತಾರೆ.

ಜಗತ್ತಿನ ವಿವಿಧ ದೇಶಗಳಲ್ಲಿ ಏನಿದೆ ನಂಬಿಕೆ?

ಕುತೂಹಲಕಾರಿ ವಿಷಯವೆಂದರೆ, ಕಪ್ಪು ಬೆಕ್ಕು ಎಲ್ಲೆಡೆ ಅಶುಭವಲ್ಲ

ಈಜಿಪ್ಟ್: ಇಲ್ಲಿ ಕಪ್ಪು ಬೆಕ್ಕನ್ನು ಅದೃಷ್ಟದ ದೇವತೆ ಎಂದು ಪೂಜಿಸಲಾಗುತ್ತದೆ.

ಬ್ರಿಟನ್ ಮತ್ತು ಜಪಾನ್: ಇಲ್ಲಿ ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದೃಷ್ಟ ಒಲಿಯಲಿದೆ ಎಂದು ಸಂಭ್ರಮಿಸುತ್ತಾರೆ.

ಫ್ರಾನ್ಸ್: ಫ್ರಾನ್ಸ್‌ನಲ್ಲಿ ಇದನ್ನು ಹಣದ ಬೆಕ್ಕು ಅಥವಾ ಜಾದೂಗಾರ ಬೆಕ್ಕು ಎಂದು ಕರೆಯಲಾಗುತ್ತದೆ.

ನಾವಿಕರು: ಸಮುದ್ರಯಾನ ಮಾಡುವ ನಾವಿಕರು ತಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಹಡಗಿನಲ್ಲಿ ಕಪ್ಪು ಬೆಕ್ಕನ್ನು ಇಟ್ಟುಕೊಳ್ಳುತ್ತಿದ್ದರು.

ಇತರ ಪ್ರಾಣಿಗಳ ನಂಬಿಕೆಗಳು:

ಬೆಕ್ಕು ಮಾತ್ರವಲ್ಲದೆ, ಪ್ರಯಾಣದ ವೇಳೆ ಹಾವು ಎದುರಾದರೆ ಅಪಾಯದ ಸೂಚನೆ, ಕಾಗೆ ಸತತವಾಗಿ ಕೂಗಿದರೆ ಸಾವಿನ ಸುದ್ದಿ ಅಥವಾ ನಾಯಿಗಳು ನಿರಂತರವಾಗಿ ಬೊಗಳಿದರೆ ಬರಲಿರುವ ಗಂಡಾಂತರದ ಸಂಕೇತವೆಂದು ಹಲವು ಕಡೆ ನಂಬಲಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia