Dailyhunt
ನೋಡುಗರ ಎದೆ ನಡುಗಿಸುತ್ತೆ ಈ 'ವಿಡಿಯೋ'

ನೋಡುಗರ ಎದೆ ನಡುಗಿಸುತ್ತೆ ಈ 'ವಿಡಿಯೋ'

ಇಬ್ಬರು ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಚಲಿಸುತ್ತಿರುವ ರೈಲಿನಲ್ಲಿ ಹತ್ತಲು ಹೋಗಿ ಫ್ಲಾಟ್​ಫಾರ್ಮ್​ನಲ್ಲೇ ಬಿದ್ದ 76 ವರ್ಷದ ವೃದ್ಧನ ಜೀವವನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಥಾಣೆಯ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ 76 ವರ್ಷದ ವೃದ್ಧ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನ್ಸೂರ್​ ಅಹಮದ್​ ಎಂಬಾತ ರಾತ್ರಿ 8 ಗಂಟೆ ಸುಮಾರಿಗೆ ಚಲಿಸುತ್ತಿರುವ ರೈಲನ್ನ ಹತ್ತೋಕೆ ಮುಂದಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

ರೈಲಿಗೆ ಸಿಲುಕಿದ ಬೈಕ್ ಅಪ್ಪಚ್ಚಿ, ಕೂದಲೆಳೆಯಲ್ಲಿ ಪಾರಾದ ಸವಾರ

ವೃದ್ಧ ಚಲಿಸುತ್ತಿರುವ ರೈಲಿಗೆ ತುಂಬಾ ಹತ್ತಿರದಲ್ಲೇ ಬಿದ್ದಿದ್ದ. ಆತ ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಪ್ರಾಣವನ್ನೇ ಕಳೆದುಕೊಳ್ತಿದ್ದ.

ಆದರೆ ರೈಲ್ವೆ ರಕ್ಷಣಾ ಪಡೆಯ ಜೀತೇಂದ್ರ ಗುಜಾರ್​ ಹಾಗೂ ಎಸ್​ಸಿ ಯಾದವ್​ ಆತನ ಪ್ರಾಣ ಕಾಪಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia