Thursday, 04 Mar, 8.07 am ಕನ್ನಡದುನಿಯಾ

ಹೋಮ್
ನೃತ್ಯ ಮಾಡುತ್ತಾ ಅಗ್ನಿಕುಂಡ ಸುತ್ತಿದ ವಧು - ವರ: ಶಾಸ್ತ್ರಕ್ಕೆ ಅಪಚಾರವೆಂದ ನೆಟ್ಟಿಗರು

ಸಪ್ತಪದಿ ತುಳಿಯುವ ವೇಳೆ ವಧು - ವರ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಟ್ವಿಟರ್​​ನಲ್ಲಿ ಈ ವಿಡಿಯೋವನ್ನ ಬಿರ್ಲಾ ಕಂಪನಿಯ ಚೇರ್​ಮನ್​ ಹಾಗೂ ಎಂಡಿ ವೇದಾಂತ್​ ಬಿರ್ಲಾ ಶೇರ್​ ಮಾಡಿದ್ದಾರೆ.

ಮದುವೆ ಶಾಸ್ತ್ರ ನಡೆಯುತ್ತಿರುವ ವೇಳೆ ವಧು ಹಾಗೂ ವರ ಅಗ್ನಿಕುಂಡದ ಸುತ್ತ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಇದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಕ್ರಮವಾಗಿದೆ. ಈ ವಿಡಿಯೋದಲ್ಲಿ ವಧು - ವರರು ನೃತ್ಯ ಮಾಡ್ತಾ ಅಗ್ನಿಕುಂಡದ ಸುತ್ತ ಸುತ್ತುವ ಮೂಲಕ ಈ ಶಾಸ್ತ್ರವನ್ನ ಎಂಜಾಯ್​ ಮಾಡಿದ್ದಾರೆ.

ಆದರೆ ವಧು - ವರರ ಈ ನಡೆಯನ್ನ ವೇದಾಂತ್​ ಖಂಡಿಸಿದ್ದಾರೆ. ಇದು ಮದುವೆಯೋ ಇಲ್ಲವೇ ನಮ್ಮ ಶಾಸ್ತ್ರಗಳನ್ನ ತ್ಯಾಗ ಮಾಡಿದ್ದೀರೋ ಎಂದು ಕೇಳಿದ್ದಾರೆ. ನೀವು ಈ ವಿಶ್ವದಲ್ಲಿ ನೀವು ಏನಾದರೂ ಆಗಿದ್ದೀರಾ ಅಂದರೆ ಅದು ನಮ್ಮ ಸಂಸ್ಕೃತಿ ಹಾಗೂ ಮೌಲ್ಯದಿಂದ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ 4.2 ಲಕ್ಷಕ್ಕೂ ಹೆಚ್ಚು ವೀವ್ಸ್ ಸಂಪಾದಿಸಿದೆ. ವಧು - ವರರ ಈ ಎಂಜಾಯ್​ಮೆಂಟ್​ನ್ನು ಕೆಲ ನೆಟ್ಟಿಗರು ಖಂಡಿಸಿದ್ದಾರೆ. ಇನ್ನು ಕೆಲವರು ಅವರು ಮದುವೆಯನ್ನ ಎಂಜಾಯ್​ ಮಾಡ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top