Wednesday, 20 Nov, 8.08 am ಕನ್ನಡದುನಿಯಾ

ಹೋಮ್
ಪಾರ್ಟಿ ವೇಳೆಯಲ್ಲೇ ನಡೆದಿದೆ ನಡೆಯಬಾರದ ಘಟನೆ

ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಇಬ್ಬರು ಯುವಕರು ನಿಗೂಢವಾಗಿ ಮೃತಪಟ್ಟಿದ್ದಾರೆ. 6 ಯುವಕರಿಗೆ ವಾಂತಿ-ಭೇದಿ ಯಾಗಿ ಅಸ್ವಸ್ಥರಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋದಂಡರಾಮಪುರದ ಅಭಿಲಾಶ್(23), ಗೋಪಿ(39) ಮೃತಪಟ್ಟವರು ಎಂದು ಹೇಳಲಾಗಿದೆ. ಯುವಕರೆಲ್ಲ ಸೇರಿ ರಾತ್ರಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದ್ದು ವಾಂತಿ, ಬೇಧಿ ಜ್ವರ ಬಂದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತರ 6 ಮಂದಿ ಸ್ನೇಹಿತರು ಕೂಡ ಅಸ್ವಸ್ಥರಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಪಾರ್ಟಿಯಲ್ಲಿ ಮಾದಕ ವಸ್ತು ಸೇವನೆಯಿಂದ ಹೀಗಾಗಿರಬಹುದೆಂದು ಹೇಳಲಾಗಿದ್ದು, ತನಿಖೆಯ ಬಳಿಕ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಜಾಂಶ ಗೊತ್ತಾಗಲಿದೆ ಎನ್ನಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top
// // // // $find_pos = strpos(SERVER_PROTOCOL, "https"); $comUrlSeg = ($find_pos !== false ? "s" : ""); ?>