Dailyhunt
ಪತಿಯ ಅನುಪಸ್ಥಿತಿಯಲ್ಲೂ ಥ್ಯಾಂಕ್ಸ್ ‌ಗಿವಿಂಗ್ ಸ್ಪೂರ್ತಿ ಜೀವಂತವಿಟ್ಟ ಅಜ್ಜಿ

ಪತಿಯ ಅನುಪಸ್ಥಿತಿಯಲ್ಲೂ ಥ್ಯಾಂಕ್ಸ್ ‌ಗಿವಿಂಗ್ ಸ್ಪೂರ್ತಿ ಜೀವಂತವಿಟ್ಟ ಅಜ್ಜಿ

ಐದು ವರ್ಷಗಳ ಹಿಂದೆ ಅಕಸ್ಮಾತ್ ಆಗಿ ಭೇಟಿಯಾದ ಅಜ್ಜಿ ವಾಂಡಾ ಡೆಚ್ ಹಾಗೂ ವಿದ್ಯಾರ್ಥಿ ಜಮಾಲ್ ಹಿಂಟನ್ ಅಲ್ಲಿಂದ ಈಚೆಗೆ ಪ್ರತಿ ವರ್ಷದ ಥ್ಯಾಂಕ್ಸ್ ‌ಗಿವಿಂಗ್ ದಿನಗಳಲ್ಲಿ ಭೇಟಿಯಾಗುತ್ತಲೇ ಇದ್ದು, ಈ ಸಂದರ್ಭದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಬಂದಿದ್ದಾರೆ.

ಈ ಇಬ್ಬರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಕೋವಿಡ್-19 ವಿರುದ್ಧ ಜಾಗೃತಿಯ ಪೋಸ್ಟರ್‌ಗಳನ್ನು ಹಿಡಿದಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬಾರಿಯ ಭೇಟಿಯ ವೇಳೆ, ಏಪ್ರಿಲ್‌ನಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ಡೆಂಚ್‌ರ ಪತಿ ಲೋನ್ನಿರ ಚಿತ್ರವನ್ನು ಹಿಡಿದಿರುವ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಹಿಂಟನ್ ಸಹ ಇಂಥದ್ದೇ ಮತ್ತೊಂದು ಚಿತ್ರವನ್ನು ಪೋಸ್ಟ್ ಮಾಡಿ ಥ್ಯಾಂಕ್ಸ್ ‌ಗಿವಿಂಗ್‌ ಅನುಭವ ಕೊಟ್ಟ ಡೆಂಚ್‌ಗೆ ಧನ್ಯವಾದ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia