ಬೆಂಗಳೂರು: ನಡು ರಸ್ತೆಯಲ್ಲಿಯೇ ಪತಿ ಮಹಾಶಯನೊಬ್ಬ ಪತ್ನಿಗೆ ಚಾಕು ಇರಿಯಲು ಯತ್ನಿಸಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ದಾಸನಪುರದಲ್ಲಿ ನಡೆದಿದೆ.
ಸಂಜಯ್ ಎಂಬಾತ ಪತ್ನಿಯನ್ನು ಹಿಮ್ಬಾಲಿಸಿ ಬಂದು ಚಾಕು ಇರಿಯಲು ಯತ್ನಿಸಿದದನೆ. ಈ ವೇಳೆ ಸಾರ್ವಜನಿಕರು ಆಕೆಯನ್ನು ರಕ್ಷಣೆ ಮಾಡಿ, ಆರೋಪಿಗೆ ಧರ್ಮದೇಟು ನೀಡಿದ್ದಾರೆ.
ಹಿಗ್ಗಾಮುಗ್ಗ ಥಳಿಸಿದ್ದಾರೆ.
ಸಂಜಯ್ ಮೊದಲ ಪತ್ನಿ ಬಿಟ್ಟು ಎರಡನೇ ಮದುವೆಯಾಗಿದ್ದ. ಆದರೆ ಪತಿಯ ಕುಡಿತದ ಚಟದಿಂದಾಗಿ ಎರಡನೇ ಪತ್ನಿ ರೋಸಿ ಹೋಗಿದ್ದಳು. ಇದೇ ಕಾರಣಕ್ಕೆ ಪದೇ ಪದೇ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಮನನೊಂದು ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ.
ಪತ್ನಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ನಲ್ಲಿ ಹಿಂಬಾಲಿಸಿ ಬಂದ ಪತಿ ಸಂಜಯ್, ಏಕಾಏಕಿ ಅಡ್ಡಗಟ್ಟಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಪತ್ನಿಯನ್ನು ರಕ್ಷಣೆ ಮಾಡಿದ್ದಾರೆ.
ಆರೋಪಿ ಪತಿಯನ್ನು ಸಾರ್ವಜನಿಕರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದು, ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

