Dailyhunt
ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆ

ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆ

ತನ್ನ ಮದುವೆಯಾದ ಎರಡೇ ದಿನಗಳಲ್ಲಿ ಪತಿಯ ಮಾಜಿ ಪತ್ನಿಗೆ ಕಿಡ್ನಿ ದಾನ ಮಾಡಿದ ಮಹಿಳೆಯೊಬ್ಬರು ಸುದ್ದಿಯಲ್ಲಿದ್ದಾರೆ.

ಜಿಮ್ ಹಾಗೂ ಮೈಲೇನ್ ಮೆರ್ತೆ ವಿಚ್ಛೇದನ ಪಡೆದು ಎರಡು ದಶಕಗಳೇ ಕಳೆದಿವೆ. ಆದರೂ ಸಹ ತಮ್ಮ ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಯಿಂದ ಅವರೇನೂ ಪರಸ್ಪರ ದೂರವಾಗಿರಲಿಲ್ಲ. ಇದೇ ವೇಳೆ ಜಿಮ್ ಡೆಬ್ಬಿ ನೀಲ್-ಸ್ಟ್ರಕ್‌ಲ್ಯಾಂಡ್‌ಳ ಮೋಹಪಾಶದಲ್ಲಿ ಬಿದ್ದ ಕಾರಣ, ಹತ್ತು ವರ್ಷಗಳ ಡೇಟಿಂಗ್ ಬಳಿಕ ಇಬ್ಬರೂ ಕಳೆದ ವರ್ಷದ ನವೆಂಬರ್‌ 22ರಂದು ಮದುವೆ ಮಾಡಿಕೊಂಡಿದ್ದಾರೆ.

ಜಿಮ್‌ರ ಮಾಜಿ ಪತ್ನಿ ಮೈಲೇನ್, ಕಿಡ್ನಿ ಸಮಸ್ಯೆಯಿಂದ ವರ್ಷಗಳನ್ನು ತಳ್ಳಿಕೊಂಡು ಬಂದಿದ್ದರು. ಕಳೆದ ನವೆಂಬರ್‌ನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೈಲೇನ್‌ರ ಕಿಡ್ನಿಗಳು ತಮ್ಮ ಕ್ಷಮತೆಯ 8% ಸಾಮರ್ಥ್ಯದಲ್ಲಿ ಮಾತ್ರವೇ ಕೆಲಸ ಮಾಡುತ್ತಿದ್ದವು.

ಮೇಲೇನ್‌ಗೆ ಆಕೆಯ ಸಹೋದರ ಕಿಡ್ನಿ ನೀಡಲು ಮುಂದಾದರೂ ಸಹ ಅದು ಮ್ಯಾಚ್‌ ಆಗಿಬರಲಿಲ್ಲ.

ಜಿಮ್‌ರ ಇಬ್ಬರೂ ಹೆಂಡಂದಿರು, ಅಷ್ಟಾಗಿ ಬೆರೆಯದೇ ಇದ್ದರೂ, ಪರಸ್ಪರ ಚೆನ್ನಾಗೇ ಇದ್ದರು. ಈ ವಿಚಾರ ತಿಳಿದ ಡೆಬ್ಬಿ, ಮೆಲೇನ್‌ ನೆರವಿಗೆ ಬಂದಿದ್ದು, ಇಬ್ಬರ ರಕ್ತ ಹಾಗೂ ಅಂಗಾಂಶಗಳು ಮ್ಯಾಚ್‌ ಆಗಿವೆ. ಮುಂದಿನ ಎರಡು ದಿನಗಳ ಒಳಗೆ ಮೈಲೇನ್‌ಗೆ ಡೆಬ್ಬಿಯ ಕಿಡ್ನಿ ಕಸಿ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia