ಕಲಬುರಗಿ: ಪತಿ ಮೇಲಿನ ಕೋಪಕ್ಕೆ ವ್ಯಕ್ತಿಯೊಬ್ಬ 4 ವರ್ಷದ ಮಗುವನ್ನು ನದಿಗೆ ಎಸೆದು ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ.
ಸೋಮರಾವ್ ಹೂಗಾರ್ ಎಂಬಾತ ಮಗುವನ್ನು ಹತ್ಯೆಗೈದ ಆರೋಪಿ. ಪತ್ನಿ ಕಲ್ಪನಾ ಜೊತೆ ಗಲಾಟೆ ಮಾಡಿಕೊಂಡಿದ್ದ.
ಇದೇ ಕೋಪದಲ್ಲಿ ಮಗು ಗುಂಡೇಶ್‌ನನ್ನು ಎತ್ತಿಕೊಂಡು ಆಟವಾಡಿಸುತ್ತಾ ಕರೆದುಕೊಂಡು ಹೋಗಿ ನಾಗರಾಳ ಜಲಾಶಯಕ್ಕೆ ಎಸೆದಿದ್ದಾನೆ.
ಈ ವಿಷಯ ತಿಳಿದ ಬಳಿಕ ಗಂಡನ ವಿರುದ್ಧ ಪತ್ನಿ ಕಲ್ಪನಾ ದೂರು ದಾಖಲಿಸಿದ್ದಾಳೆ. ಬಳಿಕ ಪೊಲೀಸರು ಮಗುವಿನ ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಈ ಕುರಿತು ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

