ಕನ್ನಡದುನಿಯಾ

1.6M Followers

ಪುಟ್ಟ ಬಾಲಕನ ಜೊತೆ ರಾಕ್ಷಸನಂತೆ ವರ್ತಿಸಿದ ಶಿಕ್ಷಕ; ಎದೆ ನಡುಗಿಸುವಂತಿದೆ ಭಯಾನಕ ವಿಡಿಯೋ

08 Jul 2022.10:58 AM

ವಿದ್ಯಾರ್ಥಿನಿಯೊಬ್ಬಳೊಂದಿಗೆ ತಾನು ಮಾತನಾಡುತ್ತಿದ್ದುದ್ದನ್ನು ಆರು ವರ್ಷದ ಬಾಲಕ ನೋಡಿರುವುದನ್ನು ಅರಿತ ಶಿಕ್ಷಕನೊಬ್ಬ ಅದನ್ನು ಎಲ್ಲಿ ಬೇರೆಯವರಿಗೆ ಹೇಳಿ ಬಿಡುತ್ತಾನೋ ಎಂಬ ಭಯದಲ್ಲಿ ಆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿ ರಾಕ್ಷಸನಂತೆ ವರ್ತಿಸಿರುವ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಟ್ಯೂಶನ್‌ ಶಿಕ್ಷಕನಾಗಿರುವ ಅಮರ್‌ ಕಾಂತ್‌ ವಿದ್ಯಾರ್ಥಿಯನ್ನು ಥಳಿಸುತ್ತಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆತ ಈ ಪುಟ್ಟ ಬಾಲಕನಿಗೆ ದೊಣ್ಣೆಯಿಂದ ಹೊಡೆಯುತ್ತಾನೆ. ಆತ ನೆಲಕ್ಕೆ ಬಿದ್ದರೂ ಕ್ರೂರಿ ಶಿಕ್ಷಕನ ಮನ ಕರಗುವುದಿಲ್ಲ. ಆತನ ಕೂದಲಿಡಿದು ಎಳೆಯುತ್ತಾನೆ. ಸಾಲದ್ದಕ್ಕೆ ನೆಲಕ್ಕೆ ಬಿದ್ದ ಬಾಲಕನನ್ನು ಮತ್ತೆ ಮತ್ತೆ ದೊಣ್ಣೆಯಿಂದ ಥಳಿಸುತ್ತಾನೆ.

ಇದನ್ನು ಸ್ಥಳದಲ್ಲಿದ್ದವರೊಬ್ಬರು ಶಿಕ್ಷಕನಿಗೆ ಅರಿವಾಗದಂತೆ ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿದು ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಇದು ವೈರಲ್‌ ಆಗಿದ್ದು, ಇದೀಗ ಕ್ರೂರಿ ಶಿಕ್ಷಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags