ಬೆಂಗಳೂರು: ಚಿಂತಾಮಣಿಯ ಒಂದು ಎಕರೆ 19 ಗುಂಟೆ ಸರ್ಕಾರಿ ಜಮೀನು ಕಬಳಿಕೆ ಆರೋಪದ ಕೇಸ್ ರದ್ದು ಕೋರಿದ ಎಂ.ಸಿ. ಸುಧಾಕರ್ ತಂದೆ ಚೌಡರೆಡ್ಡಿ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಎಂ.ಸಿ. ಸುಧಾಕರ್, ಎಂ.ಸಿ. ಬಾಲಾಜಿ ಇದರ ನೇರ ಫಲಾನುಭವಿಗಳಾಗಿದ್ದಾರೆ. ಆದರೆ 2017ರ ಎಫ್‌ಐಆರ್ ನಲ್ಲಿ ಇವರ ಹೆಸರೇ ನಾಪತ್ತೆಯಾಗಿದೆ.
ಸಾಮಾನ್ಯ ಜನರು ಭೂಮಿ ಕಬಳಿಸುವುದು ಗಂಭೀರ ಅಪರಾಧ. ರಾಜಕಾರಣಿಗಳು ಕಬಳಿಸಿದರೆ ಇನ್ನೂ ಗಂಭೀರ ಅಪರಾಧ. ಆಡಳಿತದ ಮೇಲೆ ಜನರಿಟ್ಟ ನಂಬಿಕೆಗೆ ಹಾಳಾಗುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಬಗ್ಗೆ ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಚಿಂತಾಮಣಿಯ ಕನ್ನಂಪಲ್ಲಿಯಲ್ಲಿ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗಿತ್ತು. ಗ್ರಾಮದ ಸರ್ಕಾರಿ ಜಮೀನನ್ನು ಸೈಟುಗಳಾಗಿ ಮಾರಾಟ ಮಾಡಲಾಗಿತ್ತು. ಖಾಸಗಿ ಜಮೀನಿನ ಸರ್ವೆ ನಂಬರ್ ಜೊತೆಗೆ ಸೇರಿಸಿ ಮಾರಾಟ ಮಾಡಲಾಗಿದೆ ಎಂದು ವೆಂಕಟರಮಣ ಅವರ ದೂರಿನ ಮೇರೆಗೆ ಕೇಸು ದಾಖಲಾಗಿತ್ತು.

