ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಕಲಿಕಾ ಪ್ರಗತಿ ಪರಿಶೀಲನೆಗಾಗಿ 'ಸಮುದಾಯದತ್ತ ಶಾಲೆ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ದಿನದಂದು ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ.
ಮೌಲ್ಯಮಾಪನ ಕಾರ್ಯದ ನಡುವೆಯೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಲಾಖೆ ಸೂಚಿಸಿದೆ.
ಹೌದು, ಶಾಲಾ ಶಿಕ್ಷಣ ಇಲಾಖೆಯು 2025-26ನೇ ಸಾಲಿನ ಎರಡನೇ ‘ಸಮುದಾಯದತ್ತ ಶಾಲೆ’ ಕಾರ್ಯಕ್ರಮದ ದಿನಾಂಕಗಳನ್ನು ಪ್ರಕಟಿಸಿದೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಪ್ರಮುಖ ದಿನಾಂಕಗಳು:
- ಪ್ರೌಢಶಾಲೆಗಳು: 09-04-2026
- ಪ್ರಾಥಮಿಕಶಾಲೆಗಳು: 10-04-2026
1. ಕಾರ್ಯಕ್ರಮದ ಸ್ವರೂಪ:
- ಎಸ್‌ಡಿಎಂಸಿ (SDMC) ಸದಸ್ಯರಿಗೆ ಮತ್ತು ಪೋಷಕರಿಗೆ ಮುಂಚಿತವಾಗಿ ಮಾಹಿತಿ ನೀಡುವುದು.
- ಶಾಲಾ ಆವರಣ ಮತ್ತು ಪರಿಸರವನ್ನು ಸ್ವಚ್ಛಗೊಳಿಸಿ ಅಲಂಕರಿಸುವುದು.
- ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು (ಘಟಕ ಪರೀಕ್ಷೆ, ಸೆಮಿಸ್ಟರ್ ಫಲಿತಾಂಶ) ಪೋಷಕರೊಂದಿಗೆ ಹಂಚಿಕೊಳ್ಳುವುದು.
- ಶಾಲಾ ಪ್ರಾರ್ಥನೆಯ ನಂತರ ಕನಿಷ್ಠ ಅರ್ಧ ಗಂಟೆ ಎಸ್‌ಡಿಎಂಸಿ ಸಭೆ ನಡೆಸಿ, ಗೈರುಹಾಜರಾಗುವ ಮಕ್ಕಳ ಬಗ್ಗೆ ಚರ್ಚಿಸುವುದು.
2. ವಿಶೇಷ ಸೂಚನೆಗಳು:
- SSLC ಮೌಲ್ಯಮಾಪನ: ಏಪ್ರಿಲ್ 8 ರಿಂದ SSLC ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಲಿದ್ದು, ಮೌಲ್ಯಮಾಪನಕ್ಕೆ ತೆರಳುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಶಿಕ್ಷಕರು ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಸಬೇಕು.
- ದಾಖಲಾತಿಆಂದೋಲನ: 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ದಾಖಲಿಸಲು “ದಾಖಲಾತಿ ಹಬ್ಬ” ಮತ್ತು “ಮನೆ ಮನೆಗೆ ಭೇಟಿ” ಕಾರ್ಯಕ್ರಮ ಹಮ್ಮಿಕೊಳ್ಳುವುದು.
- ಅಂಬೇಡ್ಕರ್ಜಯಂತಿ: ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸುವುದು.
3. ಸಮಯಪಟ್ಟಿ (Time Table):
- ಬೆಳಿಗ್ಗೆ 10:30 ರಿಂದ 1:30 ರವರೆಗೆ ವಿವಿಧ ತರಗತಿಗಳ ಪೋಷಕರೊಂದಿಗೆ ಸಭೆ.
- ಮಧ್ಯಾಹ್ನ 1:30 ರಿಂದ 2:30 ರವರೆಗೆ ಮಧ್ಯಾಹ್ನದ ಉಪಾಹಾರ.
- ಮಧ್ಯಾಹ್ನ 3:30 ರಿಂದ 4:30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು.
- ಸಂಜೆ 4:30 ರಿಂದ 5:25 ರವರೆಗೆ ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರಿಂದ ಮನೆ ಭೇಟಿ.




