ಬೆಂಗಳೂರು: ರಾಜ್ಯದಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್ ) ನಡೆಯುತ್ತಿದೆ. 5 ಕೋಟಿ 54 ಲಕ್ಷ 32 ಸಾವಿರದ 314 ಮಂದಿಗೆ ಅರ್ಜಿ ವಿತರಣಾ ಕಾರ್ಯ ನಡೆಯುತ್ತಿದೆ . ಇದುವರೆಗೂ 44816723 ಮಂದಿಗೆ ಅರ್ಜಿ ಕೊಟ್ಟಿದ್ದು, ಶೇಕಡಾ 80.85ನಷ್ಟು ಅರ್ಜಿ ವಿತರಣೆ ಆಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿನಡೆಸಿದ ಅನ್ಬುಕುಮಾರ್, ಜುಲೈ 29 ರವರೆಗೆ ಈ ಪ್ರಕ್ರಿಯೆ ನಿರಂತರವಾಗಿ ನೆಡೆಯಲಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ಎಸ್ಐಆರ್ ಪ್ರಕ್ರಿಯೆ ಸಂಬಂಧ ಈಗ ಕೆಲ ದೂರುಗಳು ಬಂದಿವೆ. ಅದರ ಬಗ್ಗೆ ಜಂಟಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪರಿಶೀಲಿಸುತ್ತಿದ್ದಾರೆ. ಗುಂಪಾಗಿ ಒಂದೇ ಕಡೆ ಅರ್ಜಿ ಕೊಡುವಂತಿಲ್ಲ.ಮನೆ ಮನೆಗೆ ಹೋಗಿ ಕೊಡಲೇಬೇಕು. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮವಹಿಸುತ್ತಾರೆ ಎಂದು ತಿಳಿಸಿದರು.
ಇನ್ನು ಎಸ್ಐಆರ್ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಮಾಡುವ ಬಗ್ಗೆ ಮಾಹಿತಿ ನೀಡಿದ ಅನ್ಬುಕುಮಾರ್, ಆನ್ಲೈನ್ನಲ್ಲಿ ಅಪ್ಲೈ ಮಾಡಿದ್ರೆ ಮತ್ತೆ ಬಿಎಲ್ ಒಗಳಿಗೆ ಅರ್ಜಿ ಫಿಲ್ ಮಾಡಿ ಕೊಡುವ ಅವಶ್ಯಕತೆ ಇಲ್ಲ. ಅದು ಆಟೋಮ್ಯಾಟಿಕ್ ಆಗಿ ಬಿಎಲ್ ಒ ಲಾಗಿನ್ ಗೆ ಹೋಗುತ್ತೆ. ಅರ್ಜಿ ತುಂಬಿ ಬೇಕಾದ್ರು ಬಿಎಲ್ ಒಗಳಿಗೆ ಕೊಡಬಹುದು ಎಂದು ಹೇಳಿದರು.
2002ರ SIR ನಲ್ಲಿ ನಿಮ್ಮ ಮಾಹಿತಿ ಇಲ್ಲ ಅಂದ್ರು ಪರವಾಗಿಲ್ಲ ಮತ್ತೊಮ್ಮೆ ಈಗ ನೀವೂ ಅರ್ಜಿ ಕೊಡಬಹುದು. ಈಗಿರುವ ಕೊಟ್ಟಿರುವ ಅರ್ಜಿಯಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಅಥವಾ ಬೇರೆ ಏನಾದರೂ ಚೇಂಜ್ ಮಾಡಬೇಕು ಅಂದ್ರೆ ಫಾರ್ಮ್ ನಂಬರ್ 8 ಫಿಲ್ ಮಾಡಬೇಕು. ಜುಲೈ 29 ರೊಳಗೆ ಕೊಡಬಹುದು, ಇಲ್ಲವಾದಲ್ಲಿ ಆಗಸ್ಟ್ 5 ರ ನಂತರ ನಿಮಗೆ ಫಾರ್ಮ್ ಸಿಗುತ್ತೆ ಎಂದರು
ಇನ್ನು ಹೊಸಬರು 2026 ಅಕ್ಟೋಬರ್ 1ರ ವೇಳೆಗೆ 18 ವರ್ಷ ತುಂಬಲಿದೆ ಅನ್ನೋರು ಫಾರ್ಮ್ ನಂಬರ್ 6 ನಲ್ಲಿ ಅರ್ಜಿ ಕೊಡಬಹುದು. ಪ್ರತಿ ಬಿಎಲ್ ಓ ಗೆ ನಾವು 30 ಫಾರ್ಮ್ ಕೊಟ್ಟಿದ್ದೇವೆ . ಆ ಮೂಲಕ ನೀವೂ ಮತದಾನ ಐಡಿ ಪಡೆಯಬಹುದು ಎಂದು ತಿಳಿಸಿದರು.

