Wednesday, 02 Dec, 9.56 am ಕನ್ನಡದುನಿಯಾ

ಹೋಮ್
ಸರ್ಕಾರಿ ನೌಕರರು, ಕುಟುಂಬದವರಿಗೆ 50 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ

ಕಲಬುರ್ಗಿ: ಸರ್ಕಾರಿ ನೌಕರರಿಗೆ ಏಪ್ರಿಲ್ ನಿಂದ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಅವರು ಮಾತನಾಡಿ, ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ 50 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಸರ್ಕಾರಿ ನೌಕರರ ಸಂಘ ಹೊಂದಿದೆ ಎಂದು ತಿಳಿಸಿದ್ದಾರೆ.

ಹಣಕಾಸು ಇಲಾಖೆ ಯೋಜನೆಗೆ ತಗಲುವ ವೆಚ್ಚ ಭರಿಸಲು ಒಪ್ಪಿದ್ದು, ಅಗತ್ಯವಾದಲ್ಲಿ ಸಂಘದ ವತಿಯಿಂದ ವಂತಿಗೆ ನೀಡಲಾಗುವುದು. 2021 ರ ಏಪ್ರಿಲ್ ನಿಂದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ 50 ಲಕ್ಷದವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಹೊರ ರೋಗಿಗಳು ಮತ್ತು ಒಳರೋಗಿಗಳಾಗಿ ದಾಖಲಾಗುವವರಿಗೂ ಉಚಿತ ಚಿಕಿತ್ಸೆ ಸಿಗಲಿದೆ. ನೌಕರರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟಾರೆ 20 ಲಕ್ಷ ಜನರಿಗೆ ವೈದ್ಯಕೀಯ ಸೌಲಭ್ಯದ ಪ್ರಯೋಜನ ಸಿಗಲಿದೆ. ರಾಜ್ಯ ಸರ್ಕಾರ 800 ಕೋಟಿ ರೂಪಾಯಿ, ನೌಕರರು 400 ಕೋಟಿ ರೂಪಾಯಿ ಭರಿಸಲಿದ್ದು, ವಾರ್ಷಿಕ 1200 ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ ಎನ್ನಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top