ಕಳೆದ ಕೆಲವು ದಿನಗಳಿಂದ ಸತತ ಏರಿಳಿತಕ್ಕೆ ಸಾಕ್ಷಿಯಾಗಿದ್ದ ಚಿನ್ನದ ಮಾರುಕಟ್ಟೆ ಇಂದು ಗ್ರಾಹಕರಿಗೆ ಸ್ವಲ್ಪ ಸಮಾಧಾನ ನೀಡಿದೆ. ಶುಕ್ರವಾರ ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಇಂದು ಶನಿವಾರ ಸ್ಥಿರವಾಗಿದ್ದರೆ, ಬೆಳ್ಳಿ ದರದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.
ಬಂಗಾರದ ದರ ಸ್ಥಿರ: ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಯಾವುದೇ ಬದಲಾವಣೆಯಿಲ್ಲದೆ ವಹಿವಾಟು ನಡೆಸುತ್ತಿದೆ.
ವೀಕೆಂಡ್‌ನಲ್ಲಿ ಚಿನ್ನ ಖರೀದಿಸಲು ಪ್ಲ್ಯಾನ್ ಮಾಡುತ್ತಿರುವವರಿಗೆ ಇದು ಉತ್ತಮ ಸುದ್ದಿ.ಕಳೆದ ವಾರ ಪೂರ್ತಿ ಸಾಕಷ್ಟು ಏರಿಳಿತ ಕಂಡಿದ್ದ ಲೋಹಗಳ ಬೆಲೆ, ಇಂದು ಹೆಚ್ಚಿನ ವ್ಯತ್ಯಾಸವಿಲ್ಲದೆ ವಹಿವಾಟು ಮುಂದುವರಿಸಿದೆ.
ಬೆಳ್ಳಿ ಬೆಲೆಯಲ್ಲಿ ಇಳಿಕೆ: ಇನ್ನು ಬೆಳ್ಳಿ ಪ್ರಿಯರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆಯಲ್ಲಿ ಇಂದು 100 ರೂಪಾಯಿ ಇಳಿಕೆಯಾಗಿದೆ.
ಇಂದಿನ 24 ಕ್ಯಾರೆಟ್ ಚಿನ್ನದ ದರ ಪಟ್ಟಿ
ತೂಕ (Weight) ಇಂದಿನ ಬೆಲೆ (Today) ನಿನ್ನೆಯ ಬೆಲೆ (Yesterday) ಬದಲಾವಣೆ (Change)
1 ಗ್ರಾಂ ₹15,093 ₹15,093 0 (ಸ್ಥಿರ)
8 ಗ್ರಾಂ ₹1,20,744 ₹1,20,744 0 (ಸ್ಥಿರ)
10 ಗ್ರಾಂ ₹1,50,930 ₹1,50,930 0 (ಸ್ಥಿರ)
100 ಗ್ರಾಂ ₹15,09,300 ₹15,09,300 0 (ಸ್ಥಿರ)
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,50,930
ನಾಗ್ಪುರ ₹1,50,930
ಮುಂಬೈ ₹1,50,930
ಚೆನ್ನೈ ₹1,52,180
ಕೋಲ್ಕತ್ತಾ ₹1,50,930
ಪಾಟ್ನಾ ₹1,50,980
ಸೂರತ್ ₹1,50,980
ಚಂಡೀಗಢ ₹1,51,080
ಲಕ್ನೋ ₹1,51,080

