Saturday, 12 Sep, 6.51 am ಕನ್ನಡದುನಿಯಾ

ಹೋಮ್
ಸೆ. 21 ರಿಂದ ಶಾಲಾ - ಕಾಲೇಜು ಆರಂಭಕ್ಕೆ ನಡೆದಿದೆ ಸಿದ್ಧತೆ..! ಪೂರಕವಾಗಿ ಸ್ಪಂದಿಸಲಿದ್ದಾರಾ ಪೋಷಕರು.?

ಕೊರೊನಾ ಕಾರಣಕ್ಕೆ ಕಳೆದ ಐದು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ - ಕಾಲೇಜುಗಳು ಬಂದ್ ಆಗಿದ್ದು, ಇದೀಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಇವುಗಳ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಇದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಮೊದಲ ಹಂತದಲ್ಲಿ ಸೆಪ್ಟೆಂಬರ್ 21ರಿಂದ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಾಲಾ - ಕಾಲೇಜುಗಳಿಗೆ ತೆರಳಿ ಶಿಕ್ಷಕರು ಹಾಗೂ ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಲು ಅನುಮತಿ ನೀಡಲಾಗಿದ್ದು, ಬಳಿಕ ಹಂತ ಹಂತವಾಗಿ ಇತರೆ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಕೊರೊನಾಗೆ ಇನ್ನೂ ಲಸಿಕೆ ಲಭ್ಯವಾಗದ ಕಾರಣ ಶಾಲಾ - ಕಾಲೇಜುಗಳ ಆರಂಭಕ್ಕೆ ಬಹಳಷ್ಟು ಪೋಷಕರಿಂದಲೇ ಅಪಸ್ವರ ಕೇಳಿಬರುತ್ತಿದ್ದು, ಹೀಗಾಗಿ ಸೆಪ್ಟೆಂಬರ್ 21ರಿಂದ ಶಾಲಾ - ಕಾಲೇಜುಗಳು ಆರಂಭವಾದರೂ ಇದಕ್ಕೆ ಎಷ್ಟರಮಟ್ಟಿಗೆ ಸ್ಪಂದನೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top