Dailyhunt
SHOCKING: ದಾನಿಗಳು ನೀಡಿದ ದುಡ್ಡಿಗಾಗಿ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಪುತ್ರ

SHOCKING: ದಾನಿಗಳು ನೀಡಿದ ದುಡ್ಡಿಗಾಗಿ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಪುತ್ರ

ಚಿಕ್ಕಮಗಳೂರು: ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ತಂದೆಯ ಮೇಲೆ ಪುತ್ರ ಕೊಡಲಿಯಿಂದ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾಗಿದ್ದ ತಂದೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಚನ್ನಡ್ಲಿ ಗ್ರಾಮದ ಸುಂದರ್ ಪೂಜಾರಿ(50) ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತಾಲೂಕಿನ ಚನ್ನಡ್ಲಿಯ ಸುಂದರ್ ಅವರ ಪುತ್ರ ಹಣ ನೀಡುವಂತೆ ತಂದೆ-ತಾಯಿಗೆ ಪೀಡಿಸುತ್ತಿದ್ದ. ಹಣ ಕೊಡದ ಹಿನ್ನೆಲೆಯಲ್ಲಿ ಕೊಡಲಿಯಿಂದ ಹಲ್ಲೆ ಮಾಡಿದ್ದ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನೆಯ ವಿವರ: ಸುಂದರ್ ಪಾರ್ಶ್ವವಾಯು ಪೀಡಿತರಾಗಿ ಕಳೆದ ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ.

ವಿಶೇಷ ಚೇತನ ಇಬ್ಬರು ಮಕ್ಕಳು ಮತ್ತು ಪತ್ನಿಯೊಂದಿಗೆ ಅವರು ವಾಸವಾಗಿದ್ದು, ದಾನಿಗಳು ಅವರಿಗೆ ನೆರವು ನೀಡಿದ್ದರಿಂದ ಲಕ್ಷಾಂತರ ರೂ. ಸಂಗ್ರಹವಾಗಿದೆ. ಬೆಂಗಳೂರಿನಲ್ಲಿದ್ದ ಪುತ್ರ ನಿಖೇಶ್ ದಾನಿಗಳು ನೀಡಿದ ಹಣ ಕೊಡುವಂತೆ ಜಗಳವಾಡಿ ತಂದೆಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia