ಕನ್ನಡದುನಿಯಾ

1.6M Followers

Shocking: ಎದೆ ನಡುಗಿಸುವಂತಿದೆ ಈ ವಿಡಿಯೋ; ಕುಡಿದ ಮತ್ತಿನಲ್ಲಿ ತನಗೆ ತಾನೇ ಇರಿದುಕೊಂಡ ಯುವಕ.!

19 Mar 2022.3:42 PM

ಕಂಠಪೂರ್ತಿ ಕುಡಿದು ಕೈಯ್ಯಲ್ಲಿ ಚಾಕು ಹಿಡಿದುಕೊಂಡು ಹೋಳಿ ನೃತ್ಯ ಮಾಡ್ತಿದ್ದ ಯುವಕ ತನಗೆ ತಾನೇ ಚಾಕು ಇರಿದುಕೊಂಡು ಬಿಟ್ಟಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದು.

ಹೋಳಿ ದಹನ ಕಾರ್ಯಕ್ರಮದಲ್ಲಿ ಈತ ಪಾಲ್ಗೊಂಡಿದ್ದ. ಕುಣಿಯುತ್ತ ಕುಣಿಯುತ್ತ ತನ್ನ ಎದೆಗೆ ತಾನೇ ಚಾಕು ಇರಿದುಕೊಂಡಂತೆ ಸ್ಟಂಟ್‌ ಮಾಡಲು ಹೋಗಿದ್ದಾನೆ.

ಮದ್ಯದ ನಶೆಯಲ್ಲಿದ್ದಿದ್ದರಿಂದ ಕಂಟ್ರೋಲ್‌ ಸಿಗದೆ ಚಾಕು ಅವನ ಎದೆಗೆ ಹೊಕ್ಕಿದೆ. 38 ವರ್ಷದ ಗೋಪಾಲ್‌ ತನ್ನ ತಂದೆ ಮತ್ತು ಕುಟುಂಬಸ್ಥರೊಂದಿಗೆ ಎಂಜಾಯ್‌ ಮಾಡುತ್ತಿದ್ದ. ಜೇಬಿನಲ್ಲಿದ್ದ ಚಾಕು ತೆಗೆದು ಮೂರ್ನಾಲ್ಕು ಬಾರಿ ಇರಿದುಕೊಂಡಂತೆ ಆಕ್ಷನ್‌ ಮಾಡಿದ್ದಾನೆ.

ಚಾಕು ಆಳವಾಗಿ ಎದೆಗೆ ಚುಚ್ಚಿಕೊಂಡು ರಕ್ತ ಸುರಿಯಲಾರಂಭಿಸಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags