Dailyhunt
'ಸ್ಟಾರ್‌ ವರ್ಸಸ್‌ ಫುಡ್‌ ಸೀಸನ್‌ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನನ್ಯಾ ಪಾಂಡೆ

'ಸ್ಟಾರ್‌ ವರ್ಸಸ್‌ ಫುಡ್‌ ಸೀಸನ್‌ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನನ್ಯಾ ಪಾಂಡೆ

ಬಾಲಿವುಡ್‌ನ ಯುವ ಸುಂದರಿ, ಪಡ್ಡೆಹುಡುಗರ ಹೃದಯದ ರಾಣಿ ಎಂದು ಕರೆಯಲಾಗುವ 'ಅನನ್ಯಾ ಪಾಂಡೆ' ಮೊದಲ ಬಾರಿಗೆ ಬೇಕಿಂಗ್‌ ಮಾಡಿ ತಮ್ಮ ಪೋಷಕರಿಗೆ ಖುಷಿಪಡಿಸಲು ಹರಸಾಹಸಪಟ್ಟಿದ್ದಾರೆ. ಈ ಸಾಹಸಮಯ, ಪ್ರಯಾಸಮಯ ಯತ್ನದ ವಿಡಿಯೊವು 'ಸ್ಟಾರ್‌ ವರ್ಸಸ್‌ ಫುಡ್‌ ಸೀಸನ್‌ 2'ನಲ್ಲಿ ಕಾಣಲು ಸಿಗಲಿದೆ.

ತಂದೆ ಚಂಕಿ ಪಾಂಡೆ ಹಾಗೂ ತಾಯಿ ಭಾವನಾ ಅವರನ್ನು ಔತಣಕೂಟಕ್ಕೆ ಕರೆದ ಅನನ್ಯಾ, ಚೆಫ್‌ ಫ್ರೆನಿ ಮೂಲಕ ಮೆಕರೂನ್ಸ್‌ ಮತ್ತು ಗೌಗೆರಿ ಸಿಹಿ ಖಾದ್ಯಗಳ ತಯಾರಿಕೆ ಯತ್ನಿಸಿದ್ದಾರೆ. ಆದರೆ ಅನನ್ಯಾಗೆ ಸರಿಯಾಗಿ ಯಾವುದೇ ಕೆಲಸ ಕೂಡ ಮಾಡಲು ಬಾರದೆಯೇ ಚೆಫ್‌ನಿಂದ ತೀವ್ರ ತರಾಟೆ ಎದುರಿಸಿದ್ದಾರಂತೆ.

BIG BREAKING: ಒಂದೇ ದಿನದಲ್ಲಿ ಮತ್ತೆ 31,382 ಜನರಲ್ಲಿ ಕೋವಿಡ್ ಪಾಸಿಟಿವ್; ಸಾವಿನ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ

ಬೈಸಿಕೊಂಡು ಇನ್ನೇನು ಕಣ್ಣೀರೇ ಸುರಿದು ಹೋಗುವ ಪರಿಸ್ಥಿತಿಯಲ್ಲಿ ಇದ್ದೇ, ಕೊನೆಯಲ್ಲಿ ನನ್ನ ಶ್ರಮ ಸಾರ್ಥಕವಾಗಿದ್ದು ಖಾದ್ಯವನ್ನು ಪೋಷಕರು 'ಸೂಪರ್‌ ಇದೆ ಮಗಳೇ' ಎಂದಾಗಲೇ ಎಂದು ಅನನ್ಯಾ ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೆ ಅನನ್ಯಾಳ ಸೋದರಿ ರೈಸಾ ಪಾಂಡೆ ತುಂಬ ಚೆನ್ನಾಗಿ ಅಡುಗೆ ಮಾಡುತ್ತಾರಂತೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia