ಮನೋರಂಜನೆ
ತಮಿಳು ನಟ ಸೂರ್ಯ ಚಿತ್ರದ ಹಾಡಿಗೆ ʼಬಿಗ್ ಬಿʼ ಫಿದಾ
ಅದೇ ರೀತಿ ಬಾಲಿವುಡ್ ಶೆಹನ್‍ಷಾ ಅಮಿತಾಭ್ ಬಚ್ಚನ್ ಅವರು ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವಿನಮ್ರ ಧನ್ಯವಾದ ಅರ್ಪಿಸಿರುವ ನಟ ಸೂರ್ಯ ಅವರು, ನಿಮ್ಮ ಮೆಚ್ಚುಗೆಯ ಮಾತುಗಳು ನನಗೆ ಭಾರಿ ಸಂತೋಷ ಕೊಟ್ಟಿದೆ. ಮುಂದಿನ ನಟನೆಗೆ ಹುಮ್ಮಸ್ಸು ಕೊಟ್ಟಿದೆ. ಹೃದಯವನ್ನು ಸ್ಪರ್ಶಿಸಿದೆ" ಎಂದಿದ್ದಾರೆ.
ಇದಕ್ಕೂ ಮುನ್ನ ಬಿಗ್ ಬಿ ಕೂಡ ಮಾಡಿದ್ದ ಮೆಚ್ಚುಗೆಯ ಟ್ವೀಟ್‍ನಲ್ಲಿ, "ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಕಟ್ಟಿಕೊಟ್ಟಿರುವ ಸೂರ್ಯ ಅಭಿನಯದ ಸೂರರೈ ಪೊಟ್ರೂ ಸಿನಿಮಾದ ಕೊನೆಯ ಹಾಡು ನೋಡಿ ಕಣ್ಣಂಚು ಒದ್ದೆಯಾಯಿತು. ಇಂಥ ಹಾಡೇ ಇಡೀ ಸಿನಿಮಾದ ಜೀವಾಳ" ಎಂದಿದ್ದರು.
ಅಂದಹಾಗೆ, ಸುಧಾ ಕೊಂಗರ ನಿರ್ದೇಶಿಸಿರುವ ಸೂರರೈ ಪೊಟ್ರೂ ಸಿನಿಮಾಕ್ಕೆ ಸ್ಫೂರ್ತಿ ಏರ್ ಡೆಕ್ಕನ್ ಸಂಸ್ಥಾಪಕರು ಹಾಗೂ ಕನ್ನಡಿಗರಾದ ಜಿ.ಆರ್. ಗೋಪಿನಾಥ್ ಎನ್ನುವುದು ವಿಶೇಷ. ನಟಿ ಅಪರ್ಣಾ ಜತೆಗೆ ಸೂರ್ಯ ನಟಿಸಿರುವ ಹಲವು ದೃಶ್ಯಗಳು ಅಭಿಮಾನಿಗಳ ಮನಗೆದ್ದಿದೆ.
Times like these, kind words of appreciation like these, and extraordinary moments like these are the greatest rewards for Soorarai Pottru. So touched, means a lot sir @SrBachchan #SudhaKongara @gvprakash @singersaindhavi @YugabhaarathiYb @PrimeVideoIN #KaiyilaeAagasam pic.twitter.com/I36IEaNIMV
- Suriya Sivakumar (@Suriya_offl)
Times like these, kind words of appreciation like these, and extraordinary moments like these are the greatest rewards for Soorarai Pottru. So touched, means a lot sir @SrBachchan #SudhaKongara @gvprakash @singersaindhavi @YugabhaarathiYb @PrimeVideoIN #KaiyilaeAagasam pic.twitter.com/I36IEaNIMV
— Suriya Sivakumar (@Suriya_offl) September 4, 2021
related stories
-
ರಾಷ್ಟ್ರೀಯ ಸುದ್ದಿ ಸ್ಯಾಂಡಲ್ವುಡ್ನ ಖ್ಯಾತ ಸಂಭಾಷಣೆಕಾರ ಗುರುಕಶ್ಯಪ್ ವಿಧಿವಶ
-
ಗಾಂಧಿನಗರ ಗಾಳಿಪಟ 2 ಸಿನಿಮಾ ಚಿತ್ರೀಕರಣ ಸೆಪ್ಟೆಂಬರ್ 18ರಿಂದ ಮತ್ತೆ ಶುರು
-
ಟಾಪ್ 10 ಸುದ್ದಿ ಡಾಲಿಯ "ಹೆಡ್ ಆಯಂಡ್ ಬುಷ್' ಟೀಮ್ ಗೆ ರಘು ಮುಖರ್ಜಿ ಎಂಟ್ರಿ