Dailyhunt
ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಮಹತ್ವದ ಮಾಹಿತಿ

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಮಹತ್ವದ ಮಾಹಿತಿ

2022-23ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ/ಪರಸ್ಪರ ವರ್ಗಾವಣೆ/ಕನಿಷ್ಠ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರ ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ.

ಅದರಂತೆ ಕೊಡಗು ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ /ಪರಸ್ಪರ ವರ್ಗಾವಣೆ/ಕನಿಷ್ಠ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರುಗಳಿಗೆ ಆನ್‍ಲೈನ್ ಕೌನ್ಸಿಲಿಂಗ್ ಜುಲೈ, 11 ರ ಬೆಳಗ್ಗೆ 10 ಗಂಟೆಯಿಂದ ಜುಲೈ, 17 ರವರೆಗೆ ನಡೆಯಲಿದೆ.

ವೇಳಾಪಟ್ಟಿಯನುಸಾರ ಸಂಬಂಧಿಸಿದ ಶಿಕ್ಷಕರು ನಿಗಧಿತ ದಿನಾಂಕದಂದು ಕೌನ್ಸಿಲಿಂಗ್‍ಗೆ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ತಿಳಿಸಿದ್ದಾರೆ.

The post ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಮಹತ್ವದ ಮಾಹಿತಿ first appeared on Kannada Dunia | Kannada News | Karnataka News | India News.
Dailyhunt
Disclaimer: This content has not been generated, created or edited by Dailyhunt. Publisher: Kannada Dunia