Dailyhunt
ವಿ.ಸೋಮಣ್ಣ, ನಾನು ಒಳ್ಳೆಯ ಸ್ನೇಹಿತರು ಎಂದ ಆರ್.ಅಶೋಕ್

ವಿ.ಸೋಮಣ್ಣ, ನಾನು ಒಳ್ಳೆಯ ಸ್ನೇಹಿತರು ಎಂದ ಆರ್.ಅಶೋಕ್

ದಾವಣಗೆರೆ: ಬೆಂಗಳೂರು ಉಸ್ತುವಾರಿಗಾಗಿ ಇಬ್ಬರು ಸಚಿವರ ನಡುವಿನ ಕಿತ್ತಾಟ ವಿಚಾರವಾಗಿ ಮಾತನಾಡಿದ ಆರ್.ಅಶೋಕ್, ವಿ.ಸೋಮಣ್ಣ ಹಾಗೂ ನಾನು ಉತ್ತಮ ಸ್ನೇಹಿತರು. ನಮ್ಮಲ್ಲಿ ಅಸಮಾಧಾನವಿಲ್ಲ ಎಂದು ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ನನ್ನ ಹಾಗೂ ಸೋಮಣ್ಣ ನಡುವೆ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ.

ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಬೆಂಗಳೂರು ನಗರ ಉಸ್ತುವಾರಿ ವಿಚಾರವಾಗಿಯೂ ಯಾವುದೇ ಅಸಮಾಧಾನಗಳಿಲ್ಲ ಎಂದು ಹೇಳಿದರು.

ಸದ್ಯ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದೇನೆ. ಜನರ ಸಂಕಷ್ಟಗಳನ್ನು ಆಲಿಸುತ್ತಿದ್ದೇನೆ. ಜನರು ಸ್ಮಶಾನ ಭೂಮಿಗೆ ಜಾಗವಿಲ್ಲದಿರುವ ಬಗ್ಗೆ ಮಾತನಾಡಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಜಮೀನು ಇಲ್ಲದಿರುವ ಕಾರಣಕ್ಕೆ ಯಾರಾದರೂ ಜಮೀನು ಕೊಟ್ಟರೆ ಹಣ ಕೊಡುವುದಾಗಿ ರೈತರಿಗೆ ಮನವಿ ಮಾಡಿದ್ದೇನೆ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Kannada Dunia