ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ ಮಾಡುವುದೇ ಆಗಿದೆ ಎಂದು ಆಪಾದಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್‌ನಲ್ಲಿರುವ ಬೆಸಿಲಿಕೋಸ್ ಪಾಸ್ತಾ ಎ ವಿನೋ ಹೆಸರಿನ ಈ ರೆಸ್ಟೋರಂಟ್‌ನಲ್ಲಿ ಮಾಸ್ಕ್ ಹಾಕದೇ ಇದ್ದರೆ ಮಾತ್ರವೇ ಪ್ರವೇಶ ನೀಡುವುದಲ್ಲದೇ, ಕೋವಿಡ್ ಲಸಿಕೆ ಪಡೆಯದೇ ಇರುವ ಸಾಕ್ಷಿ ತೋರಿದರೆ ಮಾತ್ರವೇ ಎಂಟ್ರಿ ಸಿಗುತ್ತದೆ. ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ. 11.25 ರಿಂದ ಶೇ.21.50 ಕ್ಕೆ ಹೆಚ್ಚಳ ಮಾಸ್ಕ್‌ ವಿರೋಧಿ ನೀತಿಯಿಂದಾಗಿ ಸುದ್ದಿಯಲ್ಲಿರುವ ಈ ಇಟಾಲಿಯನ್ ರೆಸ್ಟೋರೆಂಟ್‌ ತನ್ನ ಹೊಸ ನಿಯಮಗಳ ಬಗ್ಗೆ ಕಿಟಕಿ ಮೇಲೆ ಬರೆದಿದೆ.">
Thursday, 29 Jul, 9.02 am ಕನ್ನಡದುನಿಯಾ

ಹೋಮ್
ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ

>

ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ ಮಾಡುವುದೇ ಆಗಿದೆ ಎಂದು ಆಪಾದಿಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್‌ನಲ್ಲಿರುವ ಬೆಸಿಲಿಕೋಸ್ ಪಾಸ್ತಾ ಎ ವಿನೋ ಹೆಸರಿನ ಈ ರೆಸ್ಟೋರಂಟ್‌ನಲ್ಲಿ ಮಾಸ್ಕ್ ಹಾಕದೇ ಇದ್ದರೆ ಮಾತ್ರವೇ ಪ್ರವೇಶ ನೀಡುವುದಲ್ಲದೇ, ಕೋವಿಡ್ ಲಸಿಕೆ ಪಡೆಯದೇ ಇರುವ ಸಾಕ್ಷಿ ತೋರಿದರೆ ಮಾತ್ರವೇ ಎಂಟ್ರಿ ಸಿಗುತ್ತದೆ.

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ. 11.25 ರಿಂದ ಶೇ.21.50 ಕ್ಕೆ ಹೆಚ್ಚಳ

ಮಾಸ್ಕ್‌ ವಿರೋಧಿ ನೀತಿಯಿಂದಾಗಿ ಸುದ್ದಿಯಲ್ಲಿರುವ ಈ ಇಟಾಲಿಯನ್ ರೆಸ್ಟೋರೆಂಟ್‌ ತನ್ನ ಹೊಸ ನಿಯಮಗಳ ಬಗ್ಗೆ ಕಿಟಕಿ ಮೇಲೆ ಬರೆದಿದೆ.

"ನೋಟಿಸ್: ಲಸಿಕೆ ಪಡೆಯದೇ ಇರುವ ಸಾಕ್ಷಿ ಬೇಕಾಗಿದೆ. ಅಮೆರಿಕ ವಿರೋಧಿ ಮೂರ್ಖತನವನ್ನು ನಾವು ಸುತಾರಾಂ ಸಹಿಸಿಕೊಳ್ಳುವುದಿಲ್ಲ. ವಿಚಾರ ಮಾಡಿದ್ದಕ್ಕೆ ಧನ್ಯವಾದ" ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top