Dailyhunt
12 ಗಂಟೆ ಕೆಲಸ ಮಾಡೋಕೆ ನಾವೇನು ಮನುಷ್ಯರ, ಪ್ರಾಣಿಗಳ? : ನಾರಾಯಣ ಮೂರ್ತಿ ವಿರುದ್ಧ MLC ಬಿ.ಕೆ ಹರಿಪ್ರಸಾದ್ ಆಕ್ರೋಶ

12 ಗಂಟೆ ಕೆಲಸ ಮಾಡೋಕೆ ನಾವೇನು ಮನುಷ್ಯರ, ಪ್ರಾಣಿಗಳ? : ನಾರಾಯಣ ಮೂರ್ತಿ ವಿರುದ್ಧ MLC ಬಿ.ಕೆ ಹರಿಪ್ರಸಾದ್ ಆಕ್ರೋಶ

Kannada News Now 1 week ago

ಬೆಂಗಳೂರು : ಪ್ರತಿಯೊಬ್ಬರು 12 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೆಗೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಆಕ್ರೋಶ ಹೊರ ಹಾಕಿದ್ದು, ಕಾರ್ಮಿಕ ದಿನಾಚರಣೆಯ ವೇಳೆ ಕೆಲಸದ ಅವಧಿಯ ಬಗ್ಗೆ ಪ್ರಸ್ತಾಪಿಸಿ ಆಯಮ್ಮ ಯಾರು ಸಿಂಪಲ್ ಸುಧಾ ಅಂತೆ ಗೊತ್ತಿಲ್ಲ ಸುಧಾಮೂರ್ತಿ ಗಂಡ ಹೇಳುತ್ತಾರೆ ಹೆಚ್ಚು ಕೆಲಸ ಮಾಡಿ ಅಂತ ಹೇಳುತ್ತಾರೆ.

ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಅಂತ ಹೇಳುತ್ತಾರೆ. ದಿನಕ್ಕೆ 12 ಗಂಟೆ ಕೆಲಸ ಅಂದರೆ ನಾವೇನು ಪ್ರಾಣಿಗಳ ನಾವೇನು ಮನುಷ್ಯರ ಪ್ರಾಣಿಗಳ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಕೆ ಹರಿಪ್ರಸಾದ್ ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂತ ಹೇಳಿದರು. ಮಾಲಿಕ ಕೆಲಸ ಕೊಡಬಹುದು ನಾವು ಕೆಲಸ ಮಾಡಿದರೆ ಒಂದು ರೂಪಾಯಿ ಲೆಕ್ಕದಲ್ಲಿ ಅವರಿಗೆ ಕಂಪನಿ ಕೊಡೋಕೆ ನೂರಾರು ಎಕರೆ ಕೊಟ್ಟರು.

ನಾವು ಕೆಲಸ ಮಾಡಿಲ್ಲ ಅಂದರೆ ಮಾಲೀಕರುಗಳೇ ಇಲ್ಲ ಮಾಲೀಕ ಕೆಲಸ ಕೊಡಬಹುದು ಆದರೆ ನಮ್ಮಿಂದಲೇ ಅವರು ನಾವು ಕೆಲಸ ಮಾಡಿದರೆ ಹೋಗಬೇಕು ಸ್ವಾಭಿಮಾನ ಹಕ್ಕು ಸಮಾನತೆಗೆ ಹೋರಾಟ ಮಾಡಬೇಕು ನಮ್ಮ ಚಂದ್ರಶೇಖರ್ ಪಾರ್ಲಿಮೆಂಟ್ ನಲ್ಲಿ ಚೆನ್ನಾಗಿ ಹೇಳಿದರು ಕಂಪನಿಯನ್ನು ಮಾಡೋಕೆ ನೂರಾರು ಎಕರೆ ಕೊಟ್ಟರು ಅಂದರು ಒಂದು ರೂಪಾಯಿ ಲೆಕ್ಕದಲ್ಲಿ ಅವರಿಗೆ ನೂರಾರು ಎಕರೆ ಕೊಟ್ಟರು ಎಂದು ಆಕ್ರೋಶ ಹೊರಹಾಕಿದರು.

ಮುಂದುವರಿದು ಮಾತನಾಡಿದ ಅವರು, ಭಾರತದ ಕಾರ್ಮಿಕರ ಹಿತದೃಷ್ಟಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು. "ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕರ ಹಿತಕ್ಕಾಗಿ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ನಿಗದಿಪಡಿಸಿದ್ದಾರೆ. ಆದರೆ ಇಂದು ದೊಡ್ಡ ಉದ್ಯಮಿಗಳು ತಮ್ಮ ಲಾಭಕ್ಕಾಗಿ ಆ ಅವಧಿಯನ್ನು ವಿಸ್ತರಿಸಲು ಹೊರಟಿರುವುದು ಸಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿದೆ," ಎಂದು ಅವರು ಪ್ರತಿಪಾದಿಸಿದರು.

"ಮಾಲೀಕರು ಕೆಲಸ ಕೊಡಬಹುದು ನಿಜ, ಆದರೆ ಅದಕ್ಕಾಗಿ ಸರ್ಕಾರ ಅವರಿಗೆ ನೂರಾರು ಎಕರೆ ಭೂಮಿಯನ್ನು ರಿಯಾಯಿತಿ ದರದಲ್ಲಿ ನೀಡಿದೆ. ಒಂದು ರೂಪಾಯಿ ಲೆಕ್ಕದಲ್ಲಿ ಅವರು ಕಂಪನಿ ಬೆಳೆಸಲು ಜನಸಾಮಾನ್ಯರ ಆಸ್ತಿ ಬಳಕೆಯಾಗಿದೆ. ಹೀಗಿರುವಾಗ ಕಾರ್ಮಿಕರನ್ನು ಶೋಷಣೆ ಮಾಡುವ ಹಕ್ಕು ಯಾರಿಗೂ ಇಲ್ಲ," ಎಂದು ಹರಿಪ್ರಸಾದ್ ಎಚ್ಚರಿಸಿದರು. ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Kannada News Now