ಕರ್ನಾಟಕ
ʼ2ನೇ ಹಂತʼದಲ್ಲಿ ʼ2 ಕೋಟಿ ಜನʼರಿಗೆ ಕೊರೊನಾ ಲಸಿಕೆ: ಸಚಿವ ಡಾ.ಕೆ ಸುಧಾಕರ್

ಬೆಂಗಳೂರು: ದೇಶದ್ಯಾಂತ ಮೊದಲ ಹಂತದ ಕೊರೊನಾ ಲಸಿಕೆ ಆಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, 2ನೇ ಹಂತದಲ್ಲಿ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಮತಾನಾಡಿದ ಅವ್ರು, '2ನೇ ಅಂತದಲ್ಲಿ 2 ಕೋಟಿ ಜನರಿಗೆ ಲಸಿಕೆ ನೀಡುವ ದೊಡ್ಡ ಸವಾಲು ರಾಜ್ಯದ ಮುಂದಿದೆ. ಈ ಸವಾಲನ್ನ ನಿಭಾಯಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ' ಎಂದರು.
ಇನ್ನು 2ನೇ ಹಂತದಲ್ಲಿ ಕೊರೊನಾ ವಾರಿಯರ್ʼಗಳಾಗಿ ಶ್ರಮಿಸಿದ ಪೊಲೀಸರು, ಶಿಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಾರಿಗೆ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಜನವರಿ 24ರ ಹೊತ್ತಿಗೆ ಈ ಲಸಿಕೆ ಪಡೆಯಲಿರುವ ಕೊರೊನಾ ವಾರಿಯರ್ಸ್ಗಳ ಅಂತಿಮ ಪಟ್ಟಿ ಲಭ್ಯವಾಗೋ ನಿರೀಕ್ಷೆಯಿದೆ ಎಂದರು.
ಇನ್ನು ಗುರುವಾರದ ಅಂತ್ಯಕ್ಕೆ ಒಟ್ಟು 1,38,882 ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕೆಲವೇ ಕೆಲವು ಮಂದಿಗೆ ಸಣ್ಣ ಮಟ್ಟದ ಅಡ್ಡ ಪರಿಣಾಮಗಳಾಗಿವೆ ಹೊರತು ಲಸಿಕೆಯ ಅಡ್ಡ ಪರಿಣಾಮದಿಂದಾಗಿ ಯಾರೂ ಮೃತರಾಗಿಲ್ಲ ಎಂದು ಸ್ಪಷ್ಟಪಡಿಸಿದರು.