ನವದೆಹಲಿ : ಕೃಷಿ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿರುವುದನ್ನು ಟಿಎಂಸಿ ಖಂಡಿಸಿದ್ದಾರೆ.
ಸದನದಲ್ಲಿ ಅಶಿಸ್ತಿನ ದೃಶ್ಯಗಳಿಗೆ ಸಾಕ್ಷಿಯಾದ ಒಂದು ದಿನದ ನಂತರ ರಾಜ್ಯಸಭೆಯು ಟಿಎಂಸಿ ನಾಯಕ ಡೆರೆಕ್ ಒ'ಬ್ರೇನ್ ಸೇರಿದಂತೆ ಎಂಟು ಸದಸ್ಯರನ್ನು ಅಮಾನತುಗೊಳಿಸಿದೆ.
'ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಹೋರಾಡಿದ 8 ಸಂಸದರನ್ನು ಅಮಾನತುಗೊಳಿಸುವುದು ದುರದೃಷ್ಟಕರ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಗೌರವಿಸದ ಈ ನಿರಂಕುಶಾಧಿಕಾರಿ ಸರ್ಕಾರದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

