Thursday, 01 Oct, 5.22 pm Kannada News Now

ಕರ್ನಾಟಕ
ಅ.4ರಂದು ಒಂದೇ ದಿನ ಎರಡು ಪರೀಕ್ಷೆ : ಗೊಂದಲದಲ್ಲಿ UPSC, TET ಪರೀಕ್ಷಾರ್ಥಿಗಳು

ಬೆಂಗಳೂರು : ಅಕ್ಟೋಬರ್ 4ರಂದು ಒಂದೇ ದಿನ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಹಾಗೂ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ. ಹೀಗಾಗಿ ಅಂದು ಒಂದೇ ದಿನ ಎರಡು ಪರೀಕ್ಷೆಗಳಿಗೆ ಅರ್ಜಿ ಹಾಕಿರುವಂತ ಪರೀಕ್ಷಾರ್ಥಿಗಳು ಗೊಂದಲಕ್ಕೆ ದೂಡಿದಂತೆ ಆಗಿದೆ.

ರೈತ ಬೆಳೆ ಆಪ್ ಸಮೀಕ್ಷೆ ಯಶಸ್ವಿ : ಪ್ರಾಯೋಗಿಕ ಹಂತದ ಕಡಿಮೆ ಅವಧಿಯಲ್ಲಿಯೇ ಶೇ.88ರಷ್ಟು ಪ್ರಗತಿ

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಏಪ್ರಿಲ್ 12ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಆದ್ರೇ ಆ ದಿನವೇ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ನಿಗದಿಯಾಗಿತ್ತು. ಇದರಿಂದಾಗಿ ಈ ದಿನಾಂಕವನ್ನು ಏಪ್ರಿಲ್ 11ಕ್ಕೆ ನಿಗದಿ ಪಡಿಸಿತ್ತು. ಲಾಕ್ ಡೌನ್ ಜಾರಿಯಾದ ನಂತ್ರ ಮತ್ತೆ ಮುಂದೂಡಿತ್ತು. ಇದೀಗ ಅಕ್ಟೋಬರ್ 4ಕ್ಕೆ ಬೆಳಿಗ್ಗೆ ಡಿಇಡಿ ಮಧ್ಯಾಹ್ನ ಬಿಇಡಿ ಪದವೀಧರರಿಗೆ ಟಿಇಟಿ ಪರೀಕ್ಷೆ ನಡೆಯಲಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ - ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ಆದ್ರೇ.. ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯನ್ನು ಮೂರು ತಿಂಗಳ ಮೊದಲೇ ಅಕ್ಟೋಬರ್ 4ಕ್ಕೆ ನಿಗದಿ ಪಡಿಸಲಾಗಿದೆ. ಹೀಗಾಗಿ ಟಿಇಟಿ ಮತ್ತು ಯುಪಿಎಸ್ಸಿ ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿರುವುದರಿಂದ ಪರೀಕ್ಷಾರ್ಥಿಗಳಿಗೆ ಗೊಂದಲಕ್ಕೆ ಕಾರಣವಾಗಿದೆ. ಜೊತೆಗೆ ಒಂದೇ ದಿನ ನಿಗದಿಯಾಗಿರುವುದು ಒಂದು ಪರೀಕ್ಷೆಯನ್ನು ಬಿಡುವಂತ ಪರಿಸ್ಥಿತಿಯನ್ನು ತಂದೊಡ್ಡಿದೆ. ಹೀಗಾಗಿ ಟಿಇಟಿ ಪರೀಕ್ಷೆಯನ್ನು ಮುಂದೂಡುವಂತೆ ಅನೇಕ ಪರೀಕ್ಷಾರ್ಥಿಗಳು ಆಗ್ರಹಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top