
ಹುಬ್ಬಳ್ಳಿ : ಚಾಮರಾಜನಗರದ ಆಕ್ಸಿಜನ್ ದುರಂತ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಆಕ್ಸಿಜನ್ ಸಿಗದೇ ಐವರು ರೋಗಿಗಳು ಮೃತಪಟ್ಟಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಭಾಣಜಿ ಖಿಮಜಿ ಲೈಫ್ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ಐವರು ರೋಗಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶ್ರೇಯಸ್ ಧ್ರುನಾವತ್, ಬಾಲಚಂದ್ರ ದಂಡಗಿ, ವಿನಯಾ ನಾಯಕ, ವಾಣಿ ವೆಂಕಟೇಶ್, ದೇಸಾಯಿಗೌಡ್ರ ಶಂಕರಗೌಡ್ರ ಪಾಟೀಲ ಮೃತ ರೋಗಿಗಳು ಎಂದು ಗುರುತಿಸಲಾಗಿದೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ ತನಿಖೆ ಬಳಿಕ ಸ್ಪಷ್ಟನೆ ಸಿಗಲಿದ್ದು, ಸಾವಿಗೆ ಆಕ್ಸಿಜನ್ ಸಮಸ್ಯೆ ಕಾರಣವಲ್ಲ ಎಂದು ಹೇಳಿದ್ದಾರೆ.