Dailyhunt Logo
  • Light mode
    Follow system
    Dark mode
    • Play Story
    • App Story
ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ ಪಪ್ಪಾಯಿ ಎಲೆಗಳು

ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ ಪಪ್ಪಾಯಿ ಎಲೆಗಳು

Kannada News Now 5 years ago

ಸ್ಪೆಷಲ್ ಡೆಸ್ಕ್ : ಪಪ್ಪಾಯಿ ಹೆಚ್ಚು ಹೆಚ್ಚು ಉಪಯೋಗವಾಗುವ ಬಹುಪಯೋಗಿ ಹಣ್ಣು. ಪಪ್ಪಾಯಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೂ ಉತ್ತಮ ಹಣ್ಣು. ಕೇವಲ ಈ ಉಷ್ಣವಲಯದ ಹಣ್ಣನ್ನು ನಮಗೆ ಉತ್ತಮವಲ್ಲದೆ ಇಡೀ ಸಸ್ಯಕ್ಕೆ ಔಷಧೀಯ ಗುಣಗಳನ್ನು ನೀಡಿದೆ.

ಈ ಮೃದುವಾದ ಹಣ್ಣಿನಿಂದ ಅದ್ಭುತ ಆರೋಗ್ಯ ಲಾಭಗಳಿವೆ ನಿಜ. ಜೊತೆಗೆ ಇದರ ಎಲೆಗಳು ಕೂಡ ಅತ್ಯಂತ ಪ್ರಬಲವಾದ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ.

ಹಳದಿ, ಕಿತ್ತಳೆ, ಬಣ್ಣಗಳಲ್ಲಿರುವ ಈ ಹಣ್ಣು ಗಳಲ್ಲಿ ವಿಟಮಿನ್ ಗಳು ಹೇರಳವಾಗಿವೆ, ಹಸಿರು ಪಪ್ಪಾಯಿ ಎಲೆಯು ವಿಟಮಿನ್ ಎ, ಸಿ, ಇ, ಕೆ, ಬಿ ಖನಿಜಾಂಶಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣ ಮತ್ತು ಸೋಡಿಯಂ ಅನ್ನು ಹೊಂದಿದೆ. ಇದರಲ್ಲಿ ಪ್ಯಾಪೈನ್, ಚಿಮೊಪೈನ್ ನಂತಹ ಕಿಣ್ವಗಳೂ ಇವೆ.

ಕಾರ್ಪೈನ್ ನಂತಹ ಅಲ್ಕಾಲಾಯ್ಡ್ ಸಂಯುಕ್ತಗಳು ಇವೆ.

ಪಪ್ಪಾಯಿ ಎಲೆಯನ್ನು ನೈಸರ್ಗಿಕವಾಗಿಯೇ ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದರ ರಸ ಅದ್ಭುತ. ಬನ್ನಿ ನಿಮಗಾಗಿ ಪಪ್ಪಾಯಿ ಎಲೆಯ ರಸದ ಕೆಲವು ಅಸಾಮಾನ್ಯ ಆರೋಗ್ಯ ಪ್ರಯೋಜನಗಳನ್ನು ಪಟ್ಟಿ ಮಾಡೋಣ: .

ಡೆಂಗ್ಯೂಗೆ ಅತ್ಯುತ್ತಮ ಚಿಕಿತ್ಸೆ: ನಮ್ಮ ರಕ್ತದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಕಾರಣ ಎಂದು ತಿಳಿದಿರುವ ಡೆಂಗ್ಯೂ ವನ್ನು ಪಪ್ಪಾಯಿ ಎಲೆಯ ರಸದಿಂದ ಪವಾಡ ಸದೃಶವಾಗಿ ನಿವಾರಣೆ ಮಾಡಬಹುದು. 25 ಎಂಎಲ್ ಪಪ್ಪಾಯಿ ಎಲೆಯ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆಎರಡು ಬಾರಿ ಸೇವಿಸಿ ಡೆಂಗ್ಯೂ ಜ್ವರವನ್ನು ತಡೆಯಲು ಮತ್ತು ದೇಹವು ಆರೋಗ್ಯಕರವಾಗಿಸಲು ದೇಹಕ್ಕೆ ಪ್ಲೇಟ್ಲೆಟ್ ಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ.

ʼಫೆ.1ʼರಿಂದ ದೇಶದಲ್ಲಿ ಎಲ್ಲಾ ʼಪ್ಯಾಸೆಂಜರ್ ರೈಲುʼಗಳು ಓಡಾಡುತ್ವಾ? ಇಲ್ಲಿದೆ ನೋಡಿ ʼವೈರಲ್ ಸುದ್ದಿʼಯ ಅಸಲಿ ಮುಖ..!

2.ಯಕೃತ್ ಆರೋಗ್ಯಕ್ಕೆ ಪ್ರಯೋಜನಕಾರಿ: ಪಪ್ಪಾಯಿ ಎಲೆಯ ಸಾರದಿಂದ ಯಕೃತ್ ನ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸಬಹುದು. ಈ ರಸಗಳ ಗುಣಪಡಿಸುವ ಗುಣವು ದೀರ್ಘಕಾಲದ ಯಕೃತ್ ರೋಗಗಳಾದ ಕಾ೦ಡೀಸ್, ಯಕೃತ್ತಿನ ಸಿರೋಸಿಸ್, ಪಿತ್ತಜನಕಾಂಗರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನೈಸರ್ಗಿಕವಾಗಿ ಯಕೃತ್‌ಅನ್ನು ನಿರ್ವಿಷಗೊಳಿಸುತ್ತದೆ ಮತ್ತು ಯಕೃತ್ ನಿಂದ ವಿಷಕಾರಿ ಗಳನ್ನು ಶುದ್ಧೀಕರಿಸುತ್ತದೆ.

3.ಚರ್ಮ, ಕೂದಲು ಉತ್ತಮಗೊಳಿಸುತ್ತದೆ: ಪಪ್ಪಾಯಿ ರಸವನ್ನು ದೇಹಕ್ಕೆ ಹಚ್ಚುವುದರಿಂದ ಒಣ, ಶುಷ್ಕ ಚರ್ಮದ ಆರೈಕೆಯಾಗುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ತೈಲ ಸ್ರವಿಸುವಿಕೆಯನ್ನು ತಡೆಯುತ್ತದೆ. ಮತ್ತು ಕೂದಲಿಗೆ ಈ ರಸವು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ, ತಲೆಹೊಟ್ಟು, ಕೂದಲು ಉದುರುವಿಕೆ ಸಮಸ್ಯೆ ನಿವಾರಿಸುತ್ತದೆ.

4.ಮಲೇರಿಯಾವನ್ನು ಗುಣಪಡಿಸುತ್ತವೆ: ಎಲೆಯ ರಸದಲ್ಲಿ ಅಸಿಟೊಗೊನಿನ್ ಸಂಯುಕ್ತವಿದೆ, ಇದು ಮಲೇರಿಯಾವನ್ನು ಗುಣಪಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರ ಪ್ಲಾಸ್ಮೋಡಿಯಾಸ್ಟ್ಯಾಟಿಕ್ ಗುಣಗಳು ಮಲೇರಿಯಾ ಜ್ವರವನ್ನು ಪರೋಕ್ಷವಾಗಿ ಕಡಿಮೆ ಮಾಡುತ್ತದೆ.

5.ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಈ ಜ್ಯೂಸ್ ನ ಔಷಧೀಯ ಗುಣವು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಮೂತ್ರಪಿಂಡದ ಹಾನಿಯನ್ನು ತಡೆಯುತ್ತದೆ. ಇದರ ಕಿಣ್ವಗಳು ಹೊಟ್ಟೆ ಹುಣ್ಣು, ಅಜೀರ್ಣ ಮತ್ತು ಹೊಟ್ಟೆಯುಬ್ಬರಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತದೆ.

ಪಪ್ಪಾಯಿ ಎಲೆಯಿಂದ ಪಡೆಯಬಹುದಾದ ಪೋಷಕಾಂಶಭರಿತ, ಆರೋಗ್ಯಕರ ಗುಣಗಳನ್ನು ಗಮನಿಸಿದರೆ, ನಿಜವಾಗಿಯೂ ಇದನ್ನು ಜೀವನಪರ್ಯಂತ ಬಳಕೆ ಮಾಡಿದರೆ ತಪ್ಪಾಗದು.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/367sVuW

`ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ'ಗೆ 50 ಸಾವಿರ ಸಿಬ್ಬಂದಿ ನೇಮಕಾತಿ : ಕೇಂದ್ರ ಗೃಹ ಸಚಿವ ಅಮಿತ್ ಶಾ



Dailyhunt
Disclaimer: This content has not been generated, created or edited by Dailyhunt. Publisher: Kannada News Now