Monday, 21 Sep, 11.42 am Kannada News Now

ಕರ್ನಾಟಕ
ಅಧಿವೇಶನ ಬೇಗ ಮುಗಿಸುವ ಬಗ್ಗೆ ವಿಪಕ್ಷಗಳ ಸಹಕಾರ ಕೋರುತ್ತೇನೆ : ಸಿಎಂ ಬಿಎಸ್ ವೈ

ಬೆಂಗಳೂರು : ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಹಲವು ಶಾಸಕರಿಗೆ ಕೊರೊನಾ ಸೋಂಕಿಗೀಡಾಗಿರುವುದರಿಂದ ಅವರು ಸದನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ಅಧಿವೇಶನ ಮುಗಿಸುವ ಬಗ್ಗೆ ವಿಪಕ್ಷಗಳ ಸಹಕಾರ ಕೋರುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50 ರಿಂದ 60 ಶಾಸಕರಿಗೆ ಕೊರೊನಾ ವೈರಸ್ ಸೋಂಕಿಗೀಡಾಗಿರುವುದರಿಂದ ಅವರು ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಗತ್ಯವಿರುವ ವಿಷಯಗಳನ್ನು ಮಾತ್ರ ಚರ್ಚೆಮಾಡಿ ಅಧಿವೇಶನ ಬೇಗ ಮುಗಿಸುವ ಬಗ್ಗೆ ವಿಪಕ್ಷಗಳ ಸಹಕಾರ ಕೋರುತ್ತೇನೆ ಎಂದು ತಿಳಿಸಿದರು.

ಇನ್ನು ಸಚಿವ ಸಂಪುಟ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಿಎಸ್ ವೈ, ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ಹೈಕಮಾಂಡ್ ನಿಂದ ಸಂದೇಶ ಬಂದ ನಂತರ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top