Thursday, 04 Mar, 6.33 am Kannada News Now

ಭಾರತ
Alert : SBI ಗ್ರಾಹಕರಿಗೆ ಮಹತ್ವದ ಮಾಹಿತಿ : ಇಂತಹ ಸಂದೇಶಗಳು ಅಥವಾ ಇಮೇಲ್‌ಗಳನ್ನು ಅಪ್ಪಿ ತಪ್ಪಿ ಕ್ಲಿಕ್‌ ಮಾಡಬೇಡಿ,

ನವದೆಹಲಿ: ಆನ್ ಲೈನ್ ವಂಚನೆ ಹ್ಯಾಕರ್ ಗಳು ಒಂದು ರೀತಿಯ ತಂತ್ರಗಳನ್ನು ಅಳವಡಿಸಿಕೊಂಡು ಜನರನ್ನು ಮೋಸ ಮಾಡುತ್ತಿರುವುದು ಇತ್ತೀಚಿನ ದಿನದಲ್ಲಿ ಹೆಚ್ಚಾಗುತ್ತಿದೆ. ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವಹಿವಾಟುಗಳ ಹೆಚ್ಚಳವು ಆನ್ ಲೈನ್ ವಂಚನೆಪ್ರಕರಣಗಳನ್ನು ಹೆಚ್ಚಿಸಿದೆ. ಇದೀಗ, ತನ್ನ ಗ್ರಾಹಕರನ್ನು ಆನ್ ಲೈನ್ ವಂಚನೆಯಿಂದ ರಕ್ಷಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರಿಗೆ ಆನ್ ಲೈನ್ ವಂಚನೆಯಿಂದ ದೂರವಿರಲು ಮನವಿ ಮಾಡಿದೆ. ಎಸ್ ಬಿಐ ಗ್ರಾಹಕರ ಫೋನ್ ನಂಬರ್ ಗೆ ಸೈಬರ್ ಕ್ರಿಮಿನಲ್ ಗಳು ರಿವಾರ್ಡ್ ಪಾಯಿಂಟ್ ಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ ಎಂದು ಎಸ್ ಬಿಐ ಟ್ವೀಟ್ ನಲ್ಲಿ ತಿಳಿಸಿದೆ. ಎಸ್ ಎಂಎಸ್ ನಲ್ಲಿ, ಅವರು ಒಂದು ಲಿಂಕ್ ಕ್ಲಿಕ್ ಮಾಡುವ ಮೂಲಕ ರಿವಾರ್ಡ್ ಪಾಯಿಂಟ್ ಅನ್ನು ಸಂಗ್ರಹಿಸಲು ಕೇಳಲಾಗುತ್ತದೆ ಮತ್ತು ಇದರ ನೆಪದಿಂದ ಅವರು ಗ್ರಾಹಕರಿಂದ ತಮ್ಮ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸುತ್ತಿದ್ದಾರೆ ಅಂಥ ಹೇಳಿದೆ.

ಇದೇ ವೇಳೆ ಟ್ವಿಟ್‌ನಲ್ಲಿ ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಡೆಬಿಟ್ ಕಾರ್ಡ್ ಸಂಖ್ಯೆ, ಪಿನ್, ಒಟಿಪಿ, ಸಿವಿವಿ ಮತ್ತು ಪಾಸ್ ವರ್ಡ್ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ನೀಡಬಾರದು ಎಂದು ಬ್ಯಾಂಕ್ ಎಚ್ಚರಿಕೆ ನೀಡಿದೆ. ಎಸ್ ಎಂಎಸ್ ಮತ್ತು ಇ-ಮೇಲ್ ಮೂಲಕ ಬರುವ ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಫೋನ್, ಎಸ್ ಎಂಎಸ್ ಮತ್ತು ಇ-ಮೇಲ್ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿ ಬ್ಯಾಂಕ್ ಎಂದಿಗೂ ಕೇಳುವುದಿಲ್ಲ ಎಂದು ಎಸ್ ಬಿಐ ತಿಳಿಸಿದೆ. ಆದ್ದರಿಂದ ಇಂತಹ ಲಿಂಕ್ ಗಳ ಬಗ್ಗೆ ಎಚ್ಚರದಿಂದಿರಬೇಕು. ವಂಚನೆ ಯ ಸಂದೇಶಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಎಸ್ ಬಿಐ ಟ್ವೀಟ್ ನಲ್ಲಿ ಬರೆದುಕೊಂಡಿದೆ. ಇದಲ್ಲದೇ ಜಾಗೃತರಾಗಿರಿ ಮತ್ತು ಸುರಕ್ಷಿತವಾಗಿರಿ ಅಂತ ಹೇಳಿದೆ.

ಹ್ಯಾಕರ್ ಗಳು ಹಲವು ಬಳಕೆದಾರರಿಗೆ ಅನುಮಾನಾಸ್ಪದ ಟೆಕ್ಸ್ಟ್ ಮೆಸೇಜ್ ಗಳನ್ನು ಕಳುಹಿಸುತ್ತಿದ್ದು, . ಸ್ಟೇಟ್ ಬ್ಯಾಂಕ್ ಪ್ರಕಾರ, ಹ್ಯಾಕರ್ ಗಳ ಟಾರ್ಗೆಟ್ ವಿಶೇಷವಾಗಿ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್ ನಲ್ಲಿರುವ ಜನರಿಗೆ ನಿಮಗೆ ಬಹುಮಾನ ವಿದೆ ಅಂಥ ಹ್ಯಾಕರ್ ಗಳು ಕಳುಹಿಸಿದ ಇ-ಮೇಲ್ ದಾಗ, ಬಳಕೆದಾರನು ನಕಲಿ ವೆಬ್ ಸೈಟ್ ಗೆ ತಲುಪುತ್ತಾನೆ. ನಂತರ ಈ ನಕಲಿ ವೆಬ್ ಸೈಟ್ ನಲ್ಲಿ ಖಾಸಗಿ ಅಥವಾ ಬ್ಯಾಂಕ್ ಖಾತೆ ಮಾಹಿತಿ ಒದಗಿಸಿದರೆ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top