Dailyhunt Logo
  • Light mode
    Follow system
    Dark mode
    • Play Story
    • App Story
ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನಿಗೆ ಅರ್ಪಿಸಿದ್ದ 5 ಕೋಟಿ ಮೌಲ್ಯದ ಚಿನ್ನಲೇಪಿತ 'ರಾಮಚರಿತಮಾನಸ' ನಾಪತ್ತೆ?

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನಿಗೆ ಅರ್ಪಿಸಿದ್ದ 5 ಕೋಟಿ ಮೌಲ್ಯದ ಚಿನ್ನಲೇಪಿತ 'ರಾಮಚರಿತಮಾನಸ' ನಾಪತ್ತೆ?

Kannada News Now 4 months ago

ಉತ್ತರ ಪ್ರದೇಶ: ರಾಮಮಂದಿರಕ್ಕೆ ಹರಿದುಬಂದಿರುವ ದೇಣಿಗೆ ದುರುಪಯೋಗದ ಆರೋಪಗಳು ಈಗಾಗಲೇ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ತಪ್ಪಿತಸ್ಥರ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಇದರ ನಡುವೆಯೇ, ಮಾಜಿ ಕೇಂದ್ರ ಗೃಹ ಕಾರ್ಯದರ್ಶಿಯೊಬ್ಬರು ಶ್ರೀರಾಮನಿಗೆ ಕಾಣಿಕೆಯಾಗಿ ನೀಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಲೇಪಿತ ಪುಸ್ತಕವೇ ನಾಪತ್ತೆಯಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಏನಿದು ಗಂಭೀರ ಆರೋಪ?

ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ ಅವರ ಕುಟುಂಬವು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದ ಅತ್ಯಂತ ಅಮೂಲ್ಯವಾದ ಚಿನ್ನದ ಲೇಪಿತ ʻರಾಮಚರಿತಮಾನಸʼ ಪುಸ್ತಕ ಈಗ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಪದೇ ಪದೇ ಮನವಿ ಮಾಡಿದರೂ ಟ್ರಸ್ಟ್ ಈ ಕಾಣಿಕೆಗೆ ರಶೀದಿಯನ್ನೇ ನೀಡಿಲ್ಲ ಎನ್ನಲಾಗಿದೆ.

147 ಕೆಜಿ ತೂಕದ ಚಿನ್ನದ ಪುಸ್ತಕದ ಹಿನ್ನೆಲೆ:

ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿರುವ ಎಸ್‌. ಲಕ್ಷ್ಮಿನಾರಾಯಣ್‌ ಅವರು ಹಲವು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ:

  • ಭೇಟಿ ಮತ್ತು ಕಾಣಿಕೆ: 2024ರ ಏಪ್ರಿಲ್ ತಿಂಗಳಲ್ಲಿ ಲಕ್ಷ್ಮಿನಾರಾಯಣ್ ಅವರು ತಮ್ಮ ಪತ್ನಿ ಸರಸ್ವತಿ ಅವರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿದ್ದಾಗ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಈ ಅಪರೂಪದ ಪುಸ್ತಕವನ್ನು ಹಸ್ತಾಂತರಿಸಿದ್ದರು.

  • ಪುಸ್ತಕದ ವಿಶೇಷತೆ: ಈ ವಿಶೇಷ 'ರಾಮಚರಿತಮಾನಸ' ಪುಸ್ತಕವು ಬರೋಬ್ಬರಿ 147 ಕೆಜಿ ತೂಕ ಹೊಂದಿದ್ದು, ಇದರ ಎಲ್ಲಾ 522 ಪುಟಗಳಿಗೂ ಚಿನ್ನದ ಲೇಪನ ಮಾಡಲಾಗಿತ್ತು. ಇದರ ಅಂದಾಜು ಮೌಲ್ಯ ಸುಮಾರು 4 ರಿಂದ 5 ಕೋಟಿ ರೂಪಾಯಿ ಎನ್ನಲಾಗಿದೆ.

  • ಭಾವನಾತ್ಮಕ ಸಂಬಂಧ: ಲಕ್ಷ್ಮಿನಾರಾಯಣ್ ಅವರ ದಿವಂಗತ ತಾಯಿಯ ನೆನಪಿಗಾಗಿ ಈ ಕಾಣಿಕೆಯನ್ನು ನೀಡಲಾಗಿತ್ತು. ಅವರ ತಾಯಿ ತಮ್ಮ ಜೀವಿತಾವಧಿಯ 15 ರಿಂದ 18 ವರ್ಷಗಳನ್ನು ಕೇವಲ ರಾಮನಾಮ ಬರೆಯುವುದರಲ್ಲೇ ಕಳೆದಿದ್ದರು. ಅಷ್ಟೇ ಅಲ್ಲದೆ, ಅವರ ಕುಟುಂಬವು ಹಲವು ದಶಕಗಳಿಂದ ರಾಮಜನ್ಮಭೂಮಿ ಚಳವಳಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು.

ರಶೀದಿಗಾಗಿ ಗಂಟೆಗಟ್ಟಲೆ ಕಾಯಿಸಿದ ಚಂಪತ್ ರಾಯ್!

ಕಾಣಿಕೆಯನ್ನು ಸ್ವೀಕರಿಸುವಾಗ ಇದನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಇಡಲಾಗುವುದು ಎಂದು ಟ್ರಸ್ಟ್ ಭರವಸೆ ನೀಡಿತ್ತು. ಆದರೆ ಅದಕ್ಕೆ ಯಾವುದೇ ಅಧಿಕೃತ ರಶೀದಿಯನ್ನು ನೀಡಿರಲಿಲ್ಲ. ನಂತರದ ದಿನಗಳಲ್ಲಿ ಲಕ್ಷ್ಮಿನಾರಾಯಣ್ ಅವರು ರಶೀದಿಗಾಗಿ ಚಂಪತ್ ರಾಯ್ ಅವರನ್ನು ಭೇಟಿಯಾಗಲು ಎರಡು ಬಾರಿ ಅಯೋಧ್ಯೆಗೆ ಹೋಗಿದ್ದರು. ಮೊದಲ ಬಾರಿ ಭೇಟಿಗೆ ಬರೋಬ್ಬರಿ 9 ಗಂಟೆ ಹಾಗೂ ಎರಡನೇ ಬಾರಿ 4 ಗಂಟೆಗಳ ಕಾಲ ಕಾಯಿಸಿದರೂ ಟ್ರಸ್ಟ್ ಕಡೆಯಿಂದ ರಶೀದಿ ಮಾತ್ರ ಸಿಗಲಿಲ್ಲ.

ಆರ್‌ಎಸ್‌ಎಸ್ ಮುಖ್ಯಸ್ಥರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ!

ಈ ವಿಷಯದ ಬಗ್ಗೆ ಬೇಸತ್ತ ಮಾಜಿ ಗೃಹ ಕಾರ್ಯದರ್ಶಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥರಾದ ಡಾ. ಮೋಹನ್ ಭಾಗವತ್ ಅವರಿಗೂ ಪತ್ರ ಬರೆದು ಸಹಾಯ ಯಾಚಿಸಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥರ ಮಧ್ಯಸ್ಥಿಕೆಯ ಹೊರತಾಗಿಯೂ ರಾಮಮಂದಿರ ಟ್ರಸ್ಟ್ ರಶೀದಿ ನೀಡಲು ನಿರಾಕರಿಸಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಈ ಭಕ್ತಿಪೂರ್ವಕ ಕಾಣಿಕೆ ಸುರಕ್ಷಿತವಾಗಿದೆಯೇ ಅಥವಾ ದುರುಪಯೋಗವಾಗಿದೆಯೇ ಎಂಬ ದೊಡ್ಡ ಅನುಮಾನ ಮೂಡಿದ್ದು, ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now