Dailyhunt Logo
  • Light mode
    Follow system
    Dark mode
    • Play Story
    • App Story
ಬಾಗಲಕೋಟೆಯಲ್ಲೊಂದು ಮಹಾದುರಂತ : ಹುಡುಗಿ ನೋಡಲು ಹೋದ ಯುವಕ ಧಾರುಣವಾಗಿ ಸಾವು.!

ಬಾಗಲಕೋಟೆಯಲ್ಲೊಂದು ಮಹಾದುರಂತ : ಹುಡುಗಿ ನೋಡಲು ಹೋದ ಯುವಕ ಧಾರುಣವಾಗಿ ಸಾವು.!

Kannada News Now 4 years ago

ಬಾಗಲಕೋಟೆ : ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತರಿಗೆ ದೊಡ್ಡಿಯಿಂದ ಬಾಗಲಕೋಟೆಯ ಇಳಕಲ್ ತಾಲೂಕಿನ ಬಲಕುಂದಿ ತಾಂಡಾಕ್ಕೆ ಹೆಣ್ಣು ನೋಡಲು ಹೋಗಿದ್ದಂತ ಯುವಕ, ಆ ದಿನವೇ ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತೆರಿಗೆದೊಡ್ಡಿಯ ಪ್ರತಾಪ್ ನಾಯಕ್ (24 ) ಎಂಬ ಯುವಕ ಮದುವೆಯಾಗೋದಕ್ಕಾಗಿ ಹೆಣ್ಣು ನೋಡಲು ಬಾಗಲಕೋಟೆಯ ಇಳಕಲ್ ತಾಲೂಕಿನ ಬಲಕುಂದಿ ತಾಂಡಾಕ್ಕೆ ಕುಂಬುದ ಸಮೇತ ನಿನ್ನೆ ತೆರಳಿದ್ದನು.

ಹೀಗೆ ತೆರಳಿದ್ದ ಪ್ರತಾಪ್ ನಾಯಕ್, ಬಹಿರ್ದೆಸೆಗಾಗಿ ಸಮೀಪದ ಕಾಲುವೆ ಬಳಿ ತೆರಳಿದ್ದಾನೆ. ಇತ್ತೀಚೆಗೆ ಸುರಿದು ಮಳೆಯಿಂದ ತುಂಬಿದ್ದಂತ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು, ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಈ ಮೂಲಕ ಮದುವೆಗೆ ಹುಡುಗಿ ನೋಡಲು ಬಂದ ಯುವಕ, ಸಾವನ್ನಪ್ಪಿದ್ದಾನೆ.



Dailyhunt
Disclaimer: This content has not been generated, created or edited by Dailyhunt. Publisher: Kannada News Now