Dailyhunt
ಬೆಳಗಾವಿಯಲ್ಲಿ ಮನೆಯ ಮುಂದೆ ಕುಣಿದಿದ್ದಕ್ಕೆ, ಕುಡಗೋಲಿಂದ ಕೊಚ್ಚಿ ವ್ಯಕ್ತಿಯ ಹತ್ಯೆ : 8 ಆರೋಪಿಗಳು ಅರೆಸ್ಟ್!

ಬೆಳಗಾವಿಯಲ್ಲಿ ಮನೆಯ ಮುಂದೆ ಕುಣಿದಿದ್ದಕ್ಕೆ, ಕುಡಗೋಲಿಂದ ಕೊಚ್ಚಿ ವ್ಯಕ್ತಿಯ ಹತ್ಯೆ : 8 ಆರೋಪಿಗಳು ಅರೆಸ್ಟ್!

Kannada News Now 1 week ago

ಬೆಳಗಾವಿ : ಬೆಳಗಾವಿಯಲ್ಲಿ ಭೀಕರ ಕೊಲೆ ನಡೆದಿದ್ದು, ಸಿದ್ದೇಶ್ವರ ಜಾತ್ರೆಯಲ್ಲಿ ಮನೆಯ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಎಂಬ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.

ಕುಡುಗೋಲು ಮತ್ತು ರಾಡ್ ನಿಂದ ಹೊಡೆದು ಸಂಗನಗೌಡ (50) ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಕೆಲವು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ವೈಷ್ಯಮ್ಯ ಇತ್ತು. ವಿರೋಧಿಗಳ ಮನೆಯ ಮುಂದೆ ಸಂಗನಗೌಡ ಪಾಟೀಲ್ ಕುಣಿಯುತ್ತಿದ್ದ. ಮನೆ ಮುಂದೆ ಕುಣಿಯ ಬೇಡ ಎಂದು ಆರೋಪಿಗಳು ಹೇಳಿದ್ದರು.

ಸಂಗನಗೌಡ ಮತ್ತು ಆರೋಪಿಗಳ ನಡುವೆ ಈ ವೇಳೆ ಗಲಾಟೆಯಾಗಿ, ಗಲಾಟೆ ವಿಕೋಪಕ್ಕೆ ತಿರುಗಿ ಸಂಗನಗೌಡನ ಕೊಲೆಯಾಗಿದೆ. ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಭೀಮಪ್ಪ ಬಳಗನ್ನವರ್, ಮಂಜುನಾಥ್ ಬಳಗನ್ನವರ್, ರುದ್ರಪ್ಪ, ವಿಜಯ್, ಸೂರಪ್ಪ, ಸಿದ್ದಪ್ಪ, ನಾಗರಾಜ್ ಮತ್ತು ಬಸವಂತಪ್ಪ ಬಂಧಿತ ಆರೋಪಿಗಳು ಘಟನೆ ಸಂಭಂದ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now