ಹೋಮ್
ಬೆಂಗಳೂರಿಗೆ ಕೊರೊನಾ ಶಾಕ್ : 24 ಗಂಟೆಯಲ್ಲಿ 20870 ಪಾಸಿಟಿವ್ ಕೇಸ್ ಪತ್ತೆ, 132 ಜನರು ಸಾವು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಇಂದು 20870 ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ 132 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು 20870 ಮಂದಿಗೆ ಸೋಂಕು ತಗುಲಿದ್ರೆ, ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 840274 ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ 13946 ಮಂದಿ ಬಿಡುಗಡೆಯಾಗಿದ್ರೆ ಈ ಮೂಲಕ ಬೆಂಗಳೂರಿನಲ್ಲಿ ಇದುವರೆಗೆ 531716 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 301712 ಸಕ್ರಿಯ ಪ್ರಕರಣಗಳಿದೆ.
ಈ ಕುರಿತಂತೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 20870 ಸೇರಿದಂತೆ ರಾಜ್ಯಾಧ್ಯಂತ 44631 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 1690934ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 24714 ಜನರು ಸೇರಿದಂತೆ ಇದುವರೆಗೆ 1210013 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 464363 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.