Dailyhunt
ಬೇಸಿಗೆಯಲ್ಲಿ ಯಾವುದನ್ನೂ ತಿನ್ನಬೇಕು..? ಯಾವುದನ್ನು ತಿನ್ನಬಾರದು..ಇಲ್ಲಿದೆ ಪಟ್ಟಿ.!

ಬೇಸಿಗೆಯಲ್ಲಿ ಯಾವುದನ್ನೂ ತಿನ್ನಬೇಕು..? ಯಾವುದನ್ನು ತಿನ್ನಬಾರದು..ಇಲ್ಲಿದೆ ಪಟ್ಟಿ.!

Kannada News Now 4 years ago

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೇಸಿಕೆ ಕಾಲ ಇನ್ನೇನೂ ಬಂದೇ ಬಿಡ್ತು. ಅದರ ಬೆನ್ನಿಗೆ ರೋಗರುಜಿನಿಗಳು ಕೂಡ. ಯಾಕಂದ್ರೆ ಈ ಸಮ್ಮರ್ ಟೈಮ್ ನಲ್ಲಿ ದೇಹದ ಉಷ್ಣಾಂಶ ಜಾಸ್ತಿಯಾಗುತ್ತದೆ. ಈ ಸಮಯದಲ್ಲಿ ನಮ್ಮ ಉಡುಗೆ ತೊಡುಗೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ. ತೆಳುವಾದ ಹಾಗೂ ಹತ್ತಿ ಬಟ್ಟೆಯಿಂದ ತಯಾರಾದ ಬಟ್ಟೆಗಳನ್ನು ಧರಿಸುತ್ತೇವೆ. ಕೇವಲ ಉಡುಗೆ ತೊಡುಗೆಗಳಲ್ಲಿ ಬದಲಾದರೆ ಸಾಲದು ನಮ್ಮ ಆಹಾರ ಪದ್ಧತಿಯಲ್ಲೂ ಕೆಲವು ಮಾರ್ಪಡು ಮಾಡಿಕೊಳ್ಳಬೇಕು. ಹಾಗಿದ್ರೆ ಬೇಸಿಗೆ ಟೈಮ್ ನಲ್ಲಿ ಯಾವುದನ್ನು ಸೇವನೆ ಮಾಡಬಾರದು..? ಯಾವುದೇ ಸೇವನೆ ಮಾಡಬೇಕು..? ಎಂಬ ಪಟ್ಟಿ ಇಲ್ಲದೆ.

1.ಎಳನೀರು : ಬೇಸಿಗೆ ಸಮಯದಲ್ಲಿ ವಾರಕ್ಕೆ ಎರಡರಿಂದ ಮೂರು ಬಾರಿಯಾದರು ಎಳನೀರು ಸೇವನೆ ಮಾಡಬೇಕು.

ಇದು ದೇಹಕ್ಕೆ ತಂಪು ಮತ್ತು ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ. ದೊಡ್ಡವರಿಗೆ ಮಾತ್ರವಲ್ಲ, ಚಿಕ್ಕ ಮಕ್ಕಳಿಗೂ ಎಳನೀರು ಉತ್ತಮ.

2.ನಿಂಬೆ ಹಣ್ಣು : ಬೇಸಿಗೆಯಲ್ಲಿ ನಿಂಬೆ ಹಣ್ಣು ಬಲುಉಪಯೋಗಿ. ಇದನ್ನು ವಿವಿಧ ರೀತಿ ಬಳಸಿಕೊಳ್ಳಬಹುದು. ವಿಟಮಿನ್ ಸಿ ಇರೋದ್ರಿಂದ ಹೆಚ್ಚಾಗಿ ಈ ಸಮಯದಲ್ಲಿ ಬಳಸಬೇಕು. ನಿಂಬೆ ಹಣ್ಣನಿಂದ ಜೂಸ್ ತಯಾರಿಸಿ ಕುಡಿಬಹುದು.

3.ಕಲ್ಲಂಗಡಿ : ಬೇಸಿಗೆ ಹಣ್ಣನ್ನು ಬೇಸಿಗೆಯ ಮಿತ್ರ ಎಂದು ಕರೆಯುತ್ತಾರೆ. ಇದರಲ್ಲಿ ಬಹಳಷ್ಟು ಪೋಷಕಾಂಶ ಹಾಗೂ ಆಯಂಟಿ ಆಕ್ಸಿಡೆಂಟ್ಗಳಿವೆ. ಇದರಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಇದು ನಮ್ಮ ದೇಹದ ತೂಕ ಕಡಿಮೆ ಮಾಡಲೂ ಸಹಕಾರಿಯಾಗಿದೆ.

4.ಮಜ್ಜಿಗೆ : ಮಜ್ಜಿಗೆ ದೇಹಕ್ಕೆ ತುಂಬಾ ತಂಪು ನೀಡುತ್ತದೆ. ಹೀಗಾಗಿ ಈ ಸಮಯದಲ್ಲಿ ಸೇವನೆ ಅತ್ಯುತ್ತಮ.

5.ಹೆಸರುಬೇಳೆ : ಹೆಸರುಬೇಳೆ ತಂಪು ಪದಾರ್ಥ ಹಾಗೂ ಇದರಲ್ಲಿ ಹೆಚ್ಚು ಪ್ರೋಟೀನ್ ಅಂಶ ಇರುತ್ತದೆ. ಹೀಗಾಗಿ ಹೆಚ್ಚಾಗಿ ಬೀಸಿಗೆ ಸಮಯದಲ್ಲಿ ಇದರ ಸೇವನೆ ಉತ್ತಮ

6. ಸೌತೆಕಾಯಿ : ಸೌತೆಕಾಯಿಯಲ್ಲಿ ಹೆಚ್ಚಾಗಿ ನೀರಿನಂಶವಿದ್ದು, ಈ ಸಮಯದಲ್ಲಿ ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸುತ್ತದೆ.

7. ರಾಗಿ ಅಂಬಲಿ : ಬೇಸಿಗೆಯ ಆಹಾರ ಪರಾರ್ಥದಲ್ಲಿ ರಾಗಿ ಅಂಬಲಿ ಉತ್ತಮ ಪದಾರ್ಥವಾಗಿದೆ. ದೇಹವನ್ನು ಸದಾ ಉಷ್ಣಾಂಶದಿಂದ ಕಾಪಾಡುತ್ತದೆ.

8. ನೀರು ಕುಡಿಯಿರಿ : ನೀರು ಸೇವನೆಯಿಂದ ದೇಹದಲ್ಲಿರುವ ಶೇ. 90ರಷ್ಟು ಕಾಯಿಲೆಗಳು ಗುಣಮುಖವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಕ್ಕಿಂತ ಮನೆಯಲ್ಲೇ ಕುದಿಸಿ ತಣ್ಣನೆ ಮಾಡಿದ ಶುದ್ಧ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಯಾವ ಪದಾರ್ಥ ತಿನ್ನಬಾರದು

1.ಕರಿದ ತಿಂಡಿ ತಿನ್ನಬೇಡಿ

2.ಕಾಫಿ ಮತ್ತು ಟೀಗಳಿಂದ ದೂರ ಇರುವುದು ಒಳ್ಳೆಯದು.

3. ಮಾಂಸಾಹಾರ ತ್ಯಜಿಸಿ

4. ಜಂಕ್ ಫುಡ್ ನಿಂದ ದೂರವಿರಿ



Dailyhunt
Disclaimer: This content has not been generated, created or edited by Dailyhunt. Publisher: Kannada News Now