Wednesday, 05 Aug, 6.38 am Kannada News Now

ಭಾರತ
ಭಾರತದಲ್ಲಿ ಕೊರೋನಾ ಪರೀಕ್ಷೆಗಳ ಸಂಖ್ಯೆ ಹೆಚ್ಚು ಮಾಡುವ ಅಗತ್ಯ ಇದೆ : ಸೌಮ್ಯಾ ಸ್ವಾಮಿನಾಥನ್

ಭಾರತದಲ್ಲಿ ಕೊರೋನಾ ಪರೀಕ್ಷೆಗಳ ಸಂಖ್ಯೆ ಹೆಚ್ಚು ಮಾಡುವ ಅಗತ್ಯ ಇದೆ : ಸೌಮ್ಯಾ ಸ್ವಾಮಿನಾಥನ್

ಸ್ವಾಮಿನಾಥನ್ ತೆಲಂಗಾಣ ಐಟಿ ಮತ್ತು ಎಂಎಯುಡಿ ಸಚಿವ ಕೆ.ಟಿ.ರಾಮರಾವ್ ಅವರೊಂದಿಗೆ "ವ್ಯಾಕ್ಸಿನ್ ರೇಸ್" ಕುರಿತು ವೆಬ್‌ನಾರ್‌ನಲ್ಲಿ ಸಂಭಾಷಣೆ ನಡೆಸಿದ್ದರು. ಜಿನೀವಾದಿಂದ ನಡೆದ ಈ ಕಾರ್ಯಕ್ರಮದಲ್ಲಿ ಪರೀಕ್ಷಾ ಸಕಾರಾತ್ಮಕತೆ ಶೇ. 5 ಕ್ಕಿಂತ ಕಡಿಮೆ ಇದ್ದಾಗ ಅತ್ಯಂತ ಹೆಚ್ಚು ಪರೀಕ್ಷೆಗಳ ಅಗತ್ಯವಿರುತ್ತದೆ. ಈಗಿನ ಕೋವಿಡ್ ಪರೀಕ್ಷೆಗಳೇನೂ ಸಾಕಾಗುವುದಿಲ್ಲ. ಮತ್ತಷ್ಟು ಹೆಚ್ಚಿಸುವ ಅಗತ್ಯ ಇದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಯುಎಸ್‌ಎಗಳಂತಹ ಉತ್ತಮ ಪ್ರತಿಕ್ರಿಯೆ ತೋರಿದ ಕೆಲವು ದೇಶಗಳಿಗಿಂತ ಭಾರತವು ಕಡಿಮೆ ಸಂಖ್ಯೆಯ ಪರೀಕ್ಷೆಯನ್ನು ನಡೆಸುತ್ತಿದೆ. ಪ್ರತಿ ಸಾರ್ವಜನಿಕ ಆರೋಗ್ಯ ಇಲಾಖೆಯು ಪ್ರತಿ ಲಕ್ಷ ಅಥವಾ ಮಿಲಿಯನ್‌ಗೆ ಎಷ್ಟು ಪರೀಕ್ಷೆಗಳನ್ನು ನಡೆಸಬೇಕು ಎಂಬುದರ ಕುರಿತು ಕೆಲವು ಮಾನದಂಡಗಳನ್ನು ನಿಗದಿಪಡಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top