Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದಲ್ಲಿ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆ

ಭಾರತದಲ್ಲಿ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆ

Kannada News Now 5 years ago

ನವದೆಹಲಿ : ಭಾರತದಲ್ಲಿ COVID-19 ನ ಯುಕೆ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ 150ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಆಯಾ ರಾಜ್ಯ ಸರ್ಕಾರಗಳು ಈ ಹಿಂದೆ ನಿಗದಿಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ಎಲ್ಲರನ್ನೂ ಒಂದೇ ಕೊಠಡಿಯಲ್ಲಿ ಪ್ರತ್ಯೇಕದಲ್ಲಿ ಇರಿಸಲಾಗಿದೆ ಎಂದು ಸಚಿವಾಲಯ ಈ ಹಿಂದೆ ಹೇಳಿತ್ತು.

ಅವರ ಆಪ್ತರನ್ನು ಕೂಡ ಪರೀಕ್ಷೆ ನಡೆಸಲಾಗಿದೆ. ಸಹ-ಪ್ರಯಾಣಿಕರು, ಕುಟುಂಬ ಸಂಪರ್ಕಗಳು ಮತ್ತು ಇತರರಿಗೆ ಸಮಗ್ರ ಸಂಪರ್ಕ ಟ್ರ್ಯಾಕಿಂಗ್ ಅನ್ನು ಆರಂಭಿಸಲಾಗಿದೆ. ಇತರ ಮಾದರಿಗಳ ಮೇಲೆ ಜಿನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಸುಧಾರಿತ ಕಣ್ಗಾವಲು, ನಿಯಂತ್ರಣ, ಪರೀಕ್ಷೆ ಮತ್ತು ಮಾದರಿಗಳನ್ನು INSACOG (ಇಂಡಿಯನ್ ಸಾರ್ಸ್-ಕೊವ್-2 ಜಿನೋಮಿಕ್ಸ್ ಕನ್ಸೋರ್ಟಿಯಂ) ಪ್ರಯೋಗಾಲಯಗಳಿಗೆ ಕಳುಹಿಸುವಂತೆ ರಾಜ್ಯಗಳಿಗೆ ನಿಯಮಿತವಾಗಿ ಸಲಹೆ ನೀಡಲಾಗುತ್ತಿದೆ.

'COVID-19 ನ ಯುಕೆ ತಳಿಗೆ ಸೋಂಕಿತರಾದ ಒಟ್ಟು 150 ಜನರಿದ್ದಾರೆ' ಎಂದು ಸಚಿವಾಲಯ ತಿಳಿಸಿದೆ.

ಹೊಸ ಯುಕೆ ವೇರಿಯಂಟ್ ನ ಉಪಸ್ಥಿತಿಯನ್ನು ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಜರ್ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳು ಈಗಾಗಲೇ ವರದಿ ಮಾಡಿದೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ https://bit.ly/3sQOxW9



Dailyhunt
Disclaimer: This content has not been generated, created or edited by Dailyhunt. Publisher: Kannada News Now